Asianet Suvarna News Asianet Suvarna News

ಬಾಂಗ್ಲಾ ಮಣಿಸಿದ ಟೀಂ ಇಂಡಿಯಾ, ಬಿಜೆಪಿಯಲ್ಲಿ ಬಂಡಾಯ; ನ.16ರ ಟಾಪ್ 10 ಸುದ್ದಿ!

ಬಾಂಗ್ಲಾದೇಶ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮೂರೇ ದಿನಕ್ಕೆ ಪಂದ್ಯ ಮುಗಿಸಿದ ಕೊಹ್ಲಿ ಸೈನ್ಯ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಉಪಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಪ್ರಮುಖ 4 ಕ್ಷೇತ್ರಗಳಲ್ಲಿ ಸೋಲಿನ ಭೀತಿ ಎದುರಾಗಿದೆ. ಗಿರ್ಮಿಟ್ ನಿರ್ದೇಶಕನ ಕಣ್ಣೀರು, ಟೀಂ ಇಂಡಿಯಾ ಕ್ರಿಕೆಟಿಗನ ಸಹೋದರಿಗೆ ಬಾಲಿವುಡ್‌ನಲ್ಲಿ ಬಹುಬೇಡಿಕೆ ಸೇರಿದಂತೆ ನವೆಂಬರ್ 16ರ ಟಾಪ್ 10 ಸುದ್ದಿ ಇಲ್ಲಿವೆ.
 

Team India  victory to By polls Rift in Bjp  top 10 news of November 16
Author
Bengaluru, First Published Nov 16, 2019, 4:41 PM IST

1) ರಂಗೇರುತ್ತಿರುವ ಬೈ ಎಲೆಕ್ಷನ್‌ನಲ್ಲಿ ಹೊಸ ಬಾಂಬ್ ಸಿಡಿಸಿದ JDS ಅನರ್ಹ ಶಾಸಕ, BJP ಅಭ್ಯರ್ಥಿ

Team India  victory to By polls Rift in Bjp  top 10 news of November 16

ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಒಂದೊಂದೇ ರಾಜ್ಯ ಬಾಂಬ್‌ಗಳ ಸಿಡಿಯಲಾರಂಭಿಸಿವೆ. ನಿನ್ನೆ ಅಷ್ಟೇ ವಿಶ್ವನಾಥ್ ಅವರು ಯಾರ ಪ್ರೇರಣೆಯಿಂದ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದೆ ಎನ್ನುವುದನ್ನು ಬಹಿರಂಗಪಡಿಸಿದ್ರು. ಮತ್ತೊಂದೆಡೆ ಕಾಂಗ್ರೆಸ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ನಾನೇಕೆ ಮೈತ್ರಿ ಬೀಳಿಸಿದೆ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಟ್ಟರು. ಆದ್ರೆ, ಇದೀಗ ಮತ್ತೋರ್ವ ಜೆಡಿಎಸ್ ಅನರ್ಹ ಶಾಸಕ ಕಳೆದ ಚುನಾವಣೆಯಲ್ಲಿ ನಾನು ಹೇಗೆ ಗೆದ್ದಿದ್ದೆ..? ಎನ್ನುವ ಬಗ್ಗೆ ಹೊಸ ಬಾಂಬ್‌ ಸಿಡಿಸಿದ್ದಾರೆ. 

2) 4 ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ! ಕಮಲ ಪಡೆಗೆ ಸೋಲಿನ ಭೀತಿ?

Team India  victory to By polls Rift in Bjp  top 10 news of November 16

15 ಕ್ಷೇತ್ರಗಳಲ್ಲಿ ಉಪಚುನಾವಣೆ ಅಖಾಡ ರಂಗೇರಿದೆ. ಅನರ್ಹ ಶಾಸಕರು ಪಕ್ಷಕ್ಕೆ ಸೇರಿದ್ದು ಮೂಲ ಬಿಜೆಪಿಗರಿಗೆ ನುಂಗಲಾರದ ತುತ್ತಾಗಿದೆ. ನಾಲ್ಕು ಕ್ಷೇತ್ರಗಳಲ್ಲಂತೂ ಸ್ಥಳೀಯ ನಾಯಕರು ಬಂಡಾಯದ ಬಾವುಟ ಹಾರಿಸಿದ್ದಾರೆ.


3) ಕರ್ತವ್ಯಕ್ಕೆ ಗಡಿಯಿಲ್ಲ: ಭಾರತದ ವಿಮಾನ ಕಾಪಾಡಿದ ಪಾಕ್ ಏರ್ ಟ್ರಾಫಿಕ್ ಕಂಟ್ರೋಲರ್

Team India  victory to By polls Rift in Bjp  top 10 news of November 16
ಭಾರತ ಹಾಗೂ ಪಾಕಿಸ್ತಾನ ಬದ್ಧ ವೈರಿಗಳು ಎಂಬ ವಿಚಾರ ಇಡೀ ವಿಶ್ವಕ್ಕೇ ತಿಳಿದಿದೆ. ಕಾಶ್ಮೀರ ವಿಚಾರವಾಗಿ ಉಭಯ ದೇಶಗಳ ನಡುವಿನ ಸಂಬಂಧ ಚೆನ್ನಾಗಿಲ್ಲ. ಭಯೋತ್ಪಾದನೆಯ ವಿಚಾರದಲ್ಲೂ ಎರಡೂ ದೇಶಗಳ ನಿಲುವು ಭಿನ್ನ. ಈ ಎಲ್ಲಾ ವೈಷಮ್ಯಗಳ ನಡುವೆಯೂ ಪಾಕಿಸ್ತಾನದ ಏರ್ ಟ್ರಾಫಿಕ್ ಕಂಟ್ರೋಲರ್ ಸುಮಾರು 150 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಭಾರತದ ವಿಮಾನವನ್ನು ಕಾಪಾಡಿ ಕರ್ತವ್ಯಕ್ಕೆ ಯಾವುದೇ ಗಡಿ ಇಲ್ಲ ಎಂಬುವುದನ್ನು ಸಾರಿದ್ದಾರೆ.


4) ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್

Team India  victory to By polls Rift in Bjp  top 10 news of November 16
ಟಿಕ್ ಟಾಕ್ ಗೀಳು ಇರುವವರು ನೋಡಲೇಬೇಕಾದ ಸ್ಟೋರಿ ಇದು. ಕೆಲದಿನಗಳ ಹಿಂದೆಯಷ್ಟೇ ಟಿಕ್‌ಟಾಕ್ ಮಾಡಲು ಡೇಂಜರಸ್ ಐಡಿಯಾ ಮಾಡಿ ಮನೆಯವರಿಂದ ಒದೆ ತಿಂದ ಹುಡುಗನ ಕಥೆ ನೋಡಿದ್ವಿ. ಈಗ ಮತ್ತೊಂದು ಖತರ್ನಾಕ್ ಆಂಟಿಯ ಮುಖವಾಡ ಬಯಲಾಗಿದೆ.  ಟಿಕ್‌ಟಾಕ್‌ನಲ್ಲಿ ಪರಿಚಯವಾಗಿ, ನಂತರ ಸ್ನೇಹ, ಬಳಿಕ ವಿಷಯ ಮದುವೆವರೆಗೆ ಹೋಗಿ ದೊಡ್ಡ ಅವಾಂತರವಾಗಿದೆ. ಆಂಟಿಯ ಕರಾಮತ್ತಿಗೆ ಹುಡುಗ ಈಗ ಬಲಿಪಶುವಾಗಿದ್ದಾನೆ.

5) ಭಾರತದ ದಾಳಿಗೆ ಬಾಂಗ್ಲಾ ಖಲ್ಲಾಸ್; ಮೂರೇ ದಿನಕ್ಕೆ ಪಂದ್ಯ ಕ್ಲೋಸ್!

Team India  victory to By polls Rift in Bjp  top 10 news of November 16

ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಮೂರೇ ದಿನಕ್ಕೆ ಕಟ್ಟಿಹಾಕಿ ಸರಣಿಯಲ್ಲಿ ಮುನ್ನಡೆ ಪಡೆದುಕೊಂಡಿದೆ.

6) ಟೀಂ ಇಂಡಿಯಾದಲ್ಲಿ ಮಿಂಚಿದ ಬಳಿಕ ಕ್ರಿಕೆಟಿಗನ ಸಹೋದರಿಗೆ ಬಾಲಿವುಡ್‌ಲ್ಲಿ ಬಹು ಬೇಡಿಕೆ!

Team India  victory to By polls Rift in Bjp  top 10 news of November 16
ಟಿ20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ದೀಪಕ್ ಚಹಾರ್ ಪಾತ್ರರಾಗಿದ್ದಾರೆ. 2018ರ ಐಪಿಎಲ್ ಟೂರ್ನಿಯಿಂದ ದೀಪಕ್ ಚಹಾರ್ ಭಾರತೀಯ ಕ್ರಿಕೆಟ್‌ನಲ್ಲಿ ಮಿಂಚುತ್ತಿದ್ದಾರೆ. ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಬೆನ್ನಲ್ಲೇ ದೀಪಕ್ ತಂಗಿ ಮಾಲ್ತಿ ಚಹಾರ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 

7) ಥಿಯೇಟರ್‌ಗಳಲ್ಲಿ ಜನ ಇಲ್ಲ;' ಗಿರ್ಮಿಟ್'ನಿರ್ದೇಶಕ ರವಿ ಬಸ್ರೂರ್‌ ಕಣ್ಣೀರು!

Team India  victory to By polls Rift in Bjp  top 10 news of November 16

ಸ್ಯಾಂಡಲ್‌ವುಡ್‌ ಅದ್ಭುತ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಕಣ್ಣೀರಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರಮಂದಿರಕ್ಕೆ ಜನ ಬಾರದ ಕಾರಣ ರವಿ 'ಗಿರ್ಮಿಟ್' ವಾಟ್ಸಾಪ್‌ ಗ್ರೂಪಲ್ಲಿ ಹತಾಶೆಯನ್ನು ಹೊರ ಹಾಕಿದ್ದಾರೆ. ಬರೋಬ್ಬರಿ 280 ಮಕ್ಕಳು ನಟಿಸಿರುವ ವಿಭಿನ್ನ ಕಾನ್ಸೆಪ್ಟ್ ಇರುವ ಕಮರ್ಷಿಯಲ್ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ನಾಯಕ-ನಾಯಕಿ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರವಿ ಬಸ್ರೂರ್ ವಿಡಿಯೋವನ್ನು ಚಿತ್ರತಂಡದವರೇ ಯಾರೋ ಒಬ್ಬರು ಶೇರ್ ಮಾಡಿರುವ ಕಾರಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.

8) ಆರ್ಥಿಕತೆ ಮಂದಗತಿಯಲ್ಲಿದೆ ಗುರುವೇ: ಸತ್ಯ ಒಪ್ಪಿಕೊಂಡ ವಿತ್ತ ಸಚಿವೆ!

Team India  victory to By polls Rift in Bjp  top 10 news of November 16

ದೇಶದ ಆರ್ಥಿಕತೆ ಮಂದಗತಿಯಲ್ಲಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ಷಿಪ್ರಗತಿಯ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.


9) ಫೋಟೋ ಶೂಟ್‌ನಲ್ಲಿ ಬ್ಯೂಸಿಯಾದ ವಧು ವರ: ಹಣದ ಚೀಲದೊಂದಿಗೆ ಕಳ್ಳ ಪರಾರಿ

Team India  victory to By polls Rift in Bjp  top 10 news of November 16

ಮದುವೆ ಸಮಾರಂಭದಲ್ಲಿ ಕಳ್ಳತನವಾಗುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಿರುವಾಗ ದೆಹಲಿಯಲ್ಲಿ ನಡೆದ ಕಳ್ಳತನದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗಿದೆ. ಅತ್ತ ವೇದಿಕೆಯಲ್ಲಿದ್ದ ನವ ದಂಪತಿ ಫೋಟೋಗೆ ಫೋಸ್ ಕೊಡುವಲ್ಲಿ ಬ್ಯೂಸಿಯಾಗಿದ್ದರೆ, ಇತ್ತ ಸೂಟು ಬೂಟು ಧರಿಸಿ ಬಂದಿದ್ದ ಕಳ್ಳ ಹಣದಿಂದ ತುಂಬಿದ ಚೀಲದೊಂದಿಗೆ ಪರಾರಿಯಾಗಿದ್ದಾನೆ.

10) ಆಶ್ರಮದಲ್ಲಿದ್ದ ಯುವತಿ ನಾಪತ್ತೆ! ಮತ್ತೊಂದು ನಿತ್ಯಾ ಪುರಾಣ ಬಯಲಿಗೆ

Team India  victory to By polls Rift in Bjp  top 10 news of November 16

ಸೂರ್ಯನನ್ನು ಹತೋಟಿಯಲ್ಲಿಟ್ಟು ಇತ್ತೀಚೆಗೆ ನಗೆಪಾಟಲಿಗೆ ಈಡಾಗಿದ್ದ ಸ್ವಘೋಷಿತ ದೇವಮಾನವ ನಿತ್ಯಾನಂದನ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಆಶ್ರಮದಲ್ಲಿದ್ದ 18 ವರ್ಷ ಪ್ರಾಯದ ಯುವತಿ ನಾಪತ್ತೆಯಾಗಿದ್ದು, ಆಕೆಯ ಕುಟುಂಬಸ್ಥರು ಪೊಲೀಸರ ಮೊರೆಹೋಗಿದ್ದಾರೆ. ಪೊಲೀಸರು ಆಶ್ರಮದ ಮೇಲೆ ದಾಳಿಯೂ ನಡೆಸಿದ್ದಾರೆ. 
 

Follow Us:
Download App:
  • android
  • ios