ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ತಯಾರಿಸಲು ಕೂದಲು ದಾನ ಮಾಡಿದ ಗದಗದ ಯುವಕ
ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ.
ಗದಗ (ಜು. 10): ಸ್ಟೈಲ್‌ಗೆ ಅಂತಾ ಬಿಟ್ಟಿದ್ದ ಕೂದಲನ್ನ ಯುವಕನೊಬ್ಬ ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಇತರ ಯುವಕರಿಗೂ ಮಾದರಿಯಾಗಿದ್ದಾನೆ. ಗದಗ ನಗರದ ಹಬೀಬ್ ಬಡಾವಣೆ ನಿವಾಸಿ ಸಂಜೀವ್ ಕುಮಾರ್ ಪೂಜಾರ್ ಹೀಗೆ ಕೇಶದಾನ ಮಾಡಿದ ಯುವಕ.
ಪ್ರೈವೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂಜೀವಕುಮಾರ್ ಲಾಕ್‌ಡೌನ್ ಆಗ್ತಿದ್ದಂತೆ ಕೆಲಸ ಬಿಟ್ಟು ಊರಿಗೆ ಮರಳಿದ್ದರು. ಲಾಕ್‌ಡೌನ್ ನಲ್ಲಿ ಸ್ಟೈಲ್‌ಗೆ ಅಂತಾ ಕೂದಲನ್ನು ಬಿಟ್ಟಿದ್ದರು. ಸದಾ ಸಾಮಾಜಿಕವಾಗಿ ಯೋಚ್ನೆ ಮಾಡುವ ಸಂಜೀವಕುಮಾರ್ ಕ್ಯಾನ್ಸರ್ ಪೇಷೆಂಟ್‌ಗಳಿಗೆ ವಿಗ್ ಮಾಡಿ ಸಹಾಯ ಮಾಡೋ ಹೈದ್ರಾಬಾದ್ ಮೂಲದ ಗೋದಾವರಿ ಗೇರ್ ಡೋನೇಷನ್ಸ್ ಎನ್‌ಜಿಒ ಸಂಪರ್ಕಿಸಿ ಕೂದಲು ದಾನಕ್ಕೆ ಮುಂದಾಗಿದ್ದಾರೆ. ಹೀಗಾಗಿ 12 ಇಂಚು ಸೊಂಪಾಗಿ ಬೆಳಸಿದ ಕೂದಲನ್ನ ಎನ್‌ಜಿಒನ ಸೂಚನೆಯಂತೆ ನೀಟಾಗಿ ಕಟ್ ಮಾಡಿಸಿ ಕೋರಿಯರ್ ಮೂಲಕ ಕಳಿಹಿಸಿಲು ಮುಂದಾಗಿದ್ದಾರೆ. ಸಂಜೀವ್ ಕುಮಾರ್ ಸಾಮಾಜಿಕ ಕಳಕಳಿ ಹಾಗೂ ವಿಭಿನ್ನ ಆಲೋಚನೆಗೆ ಸದ್ಯ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.