ಲಾಠಿ ಚಾರ್ಜ್ ಮಾಡದೆ ಇನ್ನೇನು ಮುತ್ತಿಡಬೇಕಾ? ಗೃಹ ಸಚಿವರ ಮಾತಿಗೆ ಬಿಜೆಪಿ ಗರಂ!
ಪಂಚಮಸಾಲಿ ಮೀಸಲಾತಿಗಾಗಿ ಬೆಳಗಾವಿ ವಿಧಾನಸೌಧತ್ತ ನುಗ್ಗಿದ ಹೋರಾಟಗಾರರ ಮೇಲೆ ಪೊಲೀಸರು ಮಾಡಿದ ಲಾಠಿ ಚಾರ್ಜನ್ನು ಬಿಜೆಪಿ-ಜೆಡಿಎಸ್ ಖಂಡಿಸಿದೆ. ಲಾಠಿ ಚಾರ್ಜ್ ಸಮರ್ಥನೆ ವೇಳೆ ಗೃಹ ಸಚಿವ ಪರಮೇಶ್ವರ್ ಆಡಿದ ಮಾತು ಬಿಜೆಪಿ ಕೆರಳಿಸಿದೆ.
ಬೆಳಗಾವಿ(ಡಿ.12) ಪಂಚಮಸಾಲಿ ಮೀಸಲಾತಿ ಹೋರಾಟ ಸದನದಲ್ಲಿ ಭಾರಿ ಕಿಚ್ಚಿಗೆ ಕಾರಣವಾಗಿದೆ. ಪಂಚಮಸಾಲಿ ಹೋರಾಟಗಾರರ ಮೇಲಿನ ಲಾಠಿ ಚಾರ್ಜ್‌ನ್ನು ಬಿಜೆಪಿ ಸದನದಲ್ಲಿ ಖಂಡಿಸಿದೆ. ಪಂಚಮಸಾಲಿ ಸಮುದಾಯದ ಕ್ಷಮೆ ಕೇಳುವಂತೆ ಬಿಜೆಪಿ ಪಟ್ಟು ಹಿಡಿದಿದೆ. ಪೊಲೀಸರ ಲಾಠಿ ಚಾರ್ಜ್ ಸಮರ್ಥಿಸಿದ ಗೃಹ ಸಚಿವ ಪರಮೇಶ್ವರ್ ಇನ್ನೇನು ಮುತ್ತಿಡಬೇಕಿತ್ತಾ ಎಂದು ಪ್ರಶ್ನಿಸಿದ್ದರೆ. ಪಂಚಮಸಾಲಿ ಮೀಸಲಾತಿ ಹಾಗೂ ಲಾಠಿ ಚಾರ್ಜ್ ಸದನದಲ್ಲಿ ಭಾರಿ ಹೋರಾಟಕ್ಕೆ ಕಾರಣವಾಗಿದೆ.