ಫೋರ್ಜರಿ ಬಗ್ಗೆ ದರ್ಶನ್‌ಗೆ ಮೊದಲೇ ಗೊತ್ತಿತ್ತು; ಕೇಸ್‌ಗೆ ಟ್ವಿಸ್ಟ್ ಕೊಟ್ಟ ನಿರ್ಮಾಪಕ ಉಮಾಪತಿ
- ದರ್ಶನ್ ಹೆಸರಲ್ಲಿ 25 ಕೋಟಿ ರೂ ವಂಚನೆ ಯತ್ನ ಕೇಸ್‌ಗೆ ಬಿಗ್ ಟ್ವಿಸ್ಟ್
- ಫೋರ್ಜರಿ ಬಗ್ಗೆ ದರ್ಶನ್‌ಗೆ ಮೊದಲೇ ಗೊತ್ತಿತ್ತು: ಉಮಾಪತಿ ಗೌಡ
- ದರ್ಶನ್ ಸೂಚನೆಯಂತೆ ನಾವು ದೂರು ಕೊಟ್ಟೆವು
ಬೆಂಗಳೂರು (ಜು. 12): ದರ್ಶನ್ ಹೆಸರಲ್ಲಿ 25 ಕೋಟಿ ರೂ ವಂಚನೆ ಯತ್ನ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಫೋರ್ಜರಿ ಬಗ್ಗೆ ದರ್ಶನ್‌ಗೆ ಮೊದಲೇ ಗೊತ್ತಿತ್ತು. ಜೂನ್ 16 ರಂದು ಕರೆ ಮಾಡಿ ವಿಷಯ ತಿಳಿಸಿದ್ದೆ. ಅರುಣಾ ಕುಮಾರಿ ನನಗೆ ಕರೆ ಮಾಡಿದ್ದರ ಬಗ್ಗೆಯೂ ತಿಳಿಸಿದ್ದೆ. ನಾನು, ದರ್ಶನ್, ಹರ್ಷ ಒಟ್ಟಿಗೆ ಕುಳಿತು ಈ ಬಗ್ಗೆ ಚರ್ಚೆ ನಡೆಸಿದ್ದೆವು. ದರ್ಶನ್ ಸೂಚನೆಯಂತೆ ನಾನು ಬೆಂಗಳೂರಿನಲ್ಲಿ, ಹರ್ಷ ಮೈಸೂರಿನಲ್ಲಿ ದೂರು ಕೊಟ್ಟೆವು' ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
ದರ್ಶನ್ ಹೆಸರಲ್ಲಿ 25 ಕೋಟಿ ವಂಚನೆ ಕೇಸ್‌ಗೆ ಟ್ವಿಸ್ಟ್; ವಂಚಕಿ ಅರುಣಾ ಕುಮಾರಿ ರಿಲೀಸ್