Mysuru: ಬಿಎಸ್‌ವೈರಿಂದ ಶ್ರೀ ಕಾರ್ಯಸಿದ್ಧಿ ಹನುಮಾನ್‌ ದೇವಾಲಯ ಉದ್ಘಾಟನೆ

ಮೈಸೂರಿನ Mysuru) ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಿರುವ ಶ್ರೀ ಕಾರ್ಯಸಿದ್ಧಿ ಹನುಮಾನ್‌ (Hanuman Temple)  ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಉದ್ಘಾಟಿಸಿದರು.

Share this Video
  • FB
  • Linkdin
  • Whatsapp

ಮೈಸೂರು (ಡಿ. 19): ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನೂತನವಾಗಿ ಕಲ್ಲಿನಲ್ಲಿ ನಿರ್ಮಿಸಿರುವ ಶ್ರೀ ಕಾರ್ಯಸಿದ್ಧಿ ಹನುಮಾನ್‌ (Hanuman Temple) ದೇವಾಲಯವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಉದ್ಘಾಟಿಸಿದರು.

Chikkamagaluru Dattapeetha: ದತ್ತ ಜಯಂತಿ ಉತ್ಸವದಲ್ಲಿ 10 ಸಾವಿರ ಜನ ಭಾಗಿ, ಉತ್ಸವಕ್ಕೆ ಇಂದು ತೆರೆ

ಬಳಿಕ ದೇಗುಲದಲ್ಲಿ ನಡೆದ ಪೂಜಾ ಕೈಂಕರ್ಯಗಳಲ್ಲಿಯಡಿಯೂರಪ್ಪ ಭಾಗಿಯಾದರು. ಅಲ್ಲದೆ, ಆಶ್ರಮದಲ್ಲಿರುವ ಶ್ರೀ ಕಾಲಾಗ್ನಿಶಮನ ದತ್ತಾತ್ರೇಯಸ್ವಾಮಿ ದೇವಸ್ಥಾನದಲ್ಲಿ ಶ್ರೀ ದತ್ತಾತ್ರೇಯ ಜಯಂತಿ ಅಂಗವಾಗಿ ಪವಮಾನ ಮತ್ತು ಶ್ರೀ ದತ್ತಾತ್ರೇಯ ವಜ್ರ ಮಂತ್ರ ಹೋಮ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆಯಿತು.

ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶ್ರೀ ದತ್ತ ವಿಜಯಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಸ್‌.ಎ. ರಾಮದಾಸ್‌, ಎಲ್‌. ನಾಗೇಂದ್ರ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ್‌, ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌, ಉದ್ಯಮಿ ರಾಜೇಂದ್ರ, ಮೃದಾಲಯ ಪ್ರಾಧಿಕಾರ ಅಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ, ಕಾಂಪೋಸ್ಟ್‌ ನಿಗಮದ ಅಧ್ಯಕ್ಷ ಎಸ್‌. ಮಹದೇವಯ್ಯ, ಖಾದಿ ಮಂಡಳಿ ಅಧ್ಯಕ್ಷ ಎನ್‌.ಆರ್‌. ಕೃಷ್ಣಪ್ಪಗೌಡ‚ ಮೊದಲಾದವರು ಇದ್ದರು.

Related Video