Chikkamagaluru Dattapeetha: ದತ್ತ ಜಯಂತಿ ಉತ್ಸವದಲ್ಲಿ 10 ಸಾವಿರ ಜನ ಭಾಗಿ, ಉತ್ಸವಕ್ಕೆ ಇಂದು ತೆರೆ

ದತ್ತ ಜಯಂತಿ  (Datta Jayanti) ಉತ್ಸವದ ಎರಡನೇ ದಿನದಂದು ಶಾಸಕ ಸಿ.ಟಿ.ರವಿ ಸೇರಿದಂತೆ ದತ್ತಭಕ್ತರು ಚಿಕ್ಕಮಗಳೂರು (Chikkamagaluru) ನಗರದಲ್ಲಿಬೆಳಗ್ಗೆ ಮನೆ ಮನೆಗಳಿಗೆ ತೆರಳಿ ಪಡಿಯನ್ನು ಸಂಗ್ರಹಿಸಿದರು. 

First Published Dec 19, 2021, 10:06 AM IST | Last Updated Dec 19, 2021, 3:26 PM IST

ಚಿಕ್ಕಮಗಳೂರು (ಡಿ. 19): ದತ್ತ ಜಯಂತಿ  (Datta Jayanti) ಉತ್ಸವದ ಎರಡನೇ ದಿನದಂದು ಶಾಸಕ ಸಿ.ಟಿ.ರವಿ ಸೇರಿದಂತೆ ದತ್ತಭಕ್ತರು ಚಿಕ್ಕಮಗಳೂರು (Chikkamagaluru) ನಗರದಲ್ಲಿಬೆಳಗ್ಗೆ ಮನೆ ಮನೆಗಳಿಗೆ ತೆರಳಿ ಪಡಿಯನ್ನು ಸಂಗ್ರಹಿಸಿದರು. ಇದೇ ಮೊದಲ ಬಾರಿಗೆ ಶೋಭಾಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಇದು ಜನರ ಯಾತ್ರೆಯಾಗಿ ಪರಿವರ್ತನೆಗೊಂಡಿತು.

ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವಕ್ಕೆ ಇಂದು ತೆರೆ ಬೀಳಲಿದೆ. ದತ್ತಪೀಠಕ್ಕೆ ಇಂದು ರಾಜ್ಯದ ವಿವಿಧೆಡೆಗಳಿಂದ ದತ್ತಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ದತ್ತಪೀಠಕ್ಕೆ ತೆರಳಿ, ದತ್ತಪಾದುಕೆಗಳ ದರ್ಶನ ಪಡೆದು, ನಂತರ ಹೊರವಲಯದಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯದಲ್ಲಿ ಇರುಮುಡಿ ಸಮರ್ಪಿಸಲಿದ್ದಾರೆ.

ವಿಎಚ್‌ಪಿ ಹಾಗೂ ಭಜರಂಗದಳ ಲೆಕ್ಕಾಚಾರದ ಪ್ರಕಾರ ಶೋಭಾಯಾತ್ರೆಯಲ್ಲಿ ಸುಮಾರು ಏಳೆಂಟು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇತ್ತು. ಆದರೆ, 10 ಸಾವಿರಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದರು.