ಮತ್ತೆ ಲಾಕ್‌ಡೌನ್ ಮಾಡಬೇಕಾ, ಬೇಡ್ವಾ? ತಜ್ಞರ ಅಭಿಪ್ರಾಯವಿದು..!

ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ. ಇದು ನಾಡಿನ ಬಹುತೇಕ ವಿಷಯ ತಜ್ಞರ ಅಭಿಪ್ರಾಯ. 

First Published Jul 3, 2020, 10:25 AM IST | Last Updated Jul 3, 2020, 10:41 AM IST

ಬೆಂಗಳೂರು (ಜೂ. 03): ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ. ಇದು ನಾಡಿನ ಬಹುತೇಕ ವಿಷಯ ತಜ್ಞರ ಅಭಿಪ್ರಾಯ. 

ಕೊರೋನಾ ಕಬಂಧ ಬಾಹು ವ್ಯಾಪಕವಾಗಿ ವಿಸ್ತರಿಸುತ್ತಿರುವ ಈ ಹಂತದಲ್ಲಿ ಲಾಕ್‌ಡೌನ್‌ ಮತ್ತೆ ಚರ್ಚೆಗೆ ಬಂದಿದೆ. ಲಾಕ್‌ಡೌನ್‌ ಜಾರಿಯಾಗಬೇಕು ಎಂಬ ಒತ್ತಡ ಕೂಡ ನಿರ್ಮಾಣವಾಗತೊಡಗಿದೆ.

ಕೊರೋನಾ ತಡೆಗೆ 24 ತಾಸು ಕೆಲಸ ಮಾಡಿ: ಡಿಸಿಎಂ ಸೂಚನೆ

ಆದರೆ, ಲಾಕ್‌ಡೌನ್‌ನಿಂದ ಈ ಮಾರಕ ರೋಗದ ನಿಯಂತ್ರಣ ಸಾಧ್ಯವಿಲ್ಲ. ಅದರಿಂದ ಈ ರೋಗ ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದು. ಇದೇ ಪರಿಸ್ಥಿತಿ ಮುಂದುವರೆದರೆ ಕೊರೋನಾ ರಾಜ್ಯದಲ್ಲಿ ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ಗೆ ತನ್ನ ಗರಿಷ್ಠ ಮಿತಿಯನ್ನು ಮುಟ್ಟಿಅನಂತರ ಕ್ರಮೇಣ ನಿಯಂತ್ರಣಕ್ಕೆ ಬರಬಹುದು. ಆದರೆ, ಲಾಕ್‌ಡೌನ್‌ ಮಾಡಿದರೆ ಈ ಅವಧಿ ಜನವರಿ ಅಥವಾ ಫೆಬ್ರವರಿಗೆ ಮುಂದುವರೆಯಬಹುದಷ್ಟೆಎಂಬುದು ಬಹುತೇಕ ತಜ್ಞರ ಅಭಿಪ್ರಾಯ.