ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಹಲವರಿಗೆ ಉದ್ಯೋಗ ನೀಡಿದ ನಿವೃತ್ತ ಯೋಧ
ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಹಲವರಿಗೆ ಉದ್ಯೋಗ ನೀಡಿ ಸಾಕಷ್ಟು ಜನರ ಬದುಕಿಗೆ ಆಸರೆಯಾಗಿದ್ದಾರೆ ಬೆಂಗಳೂರಿನ ನಿವೃತ್ತ ಯೋಧ ಆದಿತ್ಯ ರಾಜ್ ಗುಪ್ತಾ. ಇವರು 6 ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದಿದ್ದಾರೆ. ನಿವೃತ್ತಿಯ ಬಳಿಕ ತಮ್ಮ ತಂದೆ ನಡೆಸುತ್ತಿದ್ದ ಕಾರ್ಖಾನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ತಮ್ಮನ್ನೇ ನಂಬಿದ ಹತ್ತಾರು ಕುಟುಂಬಗಳು ಕೆಲಸ ಕಳೆದುಕೊಳ್ಳಬಾರದು ಅಂತ ಮಾಸ್ಕ್ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಮಾಸ್ಕ್ ಮಾರಾಟವೂ ಅಷ್ಟಕ್ಕಷ್ಟೇ ಆಗಿದೆ. ಆದರೆ ತಮ್ಮನ್ನೇ ನಂಬಿದ 60 ಕುಟುಂಬಗಳನ್ನು ಬೀದಿಗೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎನ್ನುವ ಆದಿತ್ಯ ರಾಜ್, ಹೇಗಾದರೂ ಮಾಡಿ ಕೆಲಸ ನಡೆಸುತ್ತೇವೆ ಎಂದಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ..!
ಬೆಂಗಳೂರು (ಜು. 04): ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಹಲವರಿಗೆ ಉದ್ಯೋಗ ನೀಡಿ ಸಾಕಷ್ಟು ಜನರ ಬದುಕಿಗೆ ಆಸರೆಯಾಗಿದ್ದಾರೆ ಬೆಂಗಳೂರಿನ ನಿವೃತ್ತ ಯೋಧ ಆದಿತ್ಯ ರಾಜ್ ಗುಪ್ತಾ. ಇವರು 6 ವರ್ಷದ ಹಿಂದೆ ಸೇನೆಯಿಂದ ನಿವೃತ್ತಿ ಪಡೆದಿದ್ದಾರೆ. ನಿವೃತ್ತಿಯ ಬಳಿಕ ತಮ್ಮ ತಂದೆ ನಡೆಸುತ್ತಿದ್ದ ಕಾರ್ಖಾನೆಯನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತರು. ತಮ್ಮನ್ನೇ ನಂಬಿದ ಹತ್ತಾರು ಕುಟುಂಬಗಳು ಕೆಲಸ ಕಳೆದುಕೊಳ್ಳಬಾರದು ಅಂತ ಮಾಸ್ಕ್ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಮಾಸ್ಕ್ ಮಾರಾಟವೂ ಅಷ್ಟಕ್ಕಷ್ಟೇ ಆಗಿದೆ. ಆದರೆ ತಮ್ಮನ್ನೇ ನಂಬಿದ 60 ಕುಟುಂಬಗಳನ್ನು ಬೀದಿಗೆ ಬರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು ಎನ್ನುವ ಆದಿತ್ಯ ರಾಜ್, ಹೇಗಾದರೂ ಮಾಡಿ ಕೆಲಸ ನಡೆಸುತ್ತೇವೆ ಎಂದಿದ್ದಾರೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ..!