Hijab Row: ಭಾರತೀಯ ಮುಸ್ಲಿಂ ಹೇಗಿರಬೇಕು..? ಮುಸಲ್ಮಾನ ನಾಯಕರು ಹೀಗೆ ಹೇಳ್ತಾರೆ
ಹಿಜಾಬ್ ಸಂಘರ್ಷ ದಿನೇ ದಿನೇ ಹೊಸ ಹೊಸ ಸ್ವರೂಪ ಪಡೆಯುತ್ತಿದೆ. ಸಾಕಷ್ಟು ಜನ ಮುಸಲ್ಮಾನರು, ಭಾರತೀಯ ಮುಸಲ್ಮಾನರು ಹೇಗಿರಬೇಕು ಎಂದು ಮಾತನಾಡಿದ್ದಾರೆ.
ಬೆಂಗಳೂರು (ಫೆ. 18): ಹಿಜಾಬ್ ಸಂಘರ್ಷ (Hijab Fight) ದಿನೇ ದಿನೇ ಹೊಸ ಹೊಸ ಸ್ವರೂಪ ಪಡೆಯುತ್ತಿದೆ. ಸಾಕಷ್ಟು ಜನ ಮುಸಲ್ಮಾನರು, ಭಾರತೀಯ ಮುಸಲ್ಮಾನರು ಹೇಗಿರಬೇಕು ಎಂದು ಮಾತನಾಡಿದ್ದಾರೆ.
'ಭಾರತ ಸಂವಿಧಾನ ಆಧಾರಿತ ದೇಶ. ಇಲ್ಲಿ ಸಂವಿಧಾನ ಹೇಳಿದಂತೆ ನಾವು ನಡೆದುಕೊಳ್ಳಬೇಕು. ನಾನೊಬ್ಬ ಮುಸಲ್ಮಾನನಾಗಿ, ನನ್ನ ಧರ್ಮಕ್ಕೆ ಇಲ್ಲಿ ಯಾವ ತೊಂದರೆಯೂ ಆಗಿಲ್ಲ. ಭಾರತದಲ್ಲಿ ಹುಟ್ಟಿದ ನಾವು ಇಲ್ಲಿನ ನೆಲ, ಜಲ, ಸಂಸ್ಕೃತಿಗೆ ನಾವು ಗೌರವಿಸಬೇಕು' ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.
ಮುಸ್ಲಿಂ ವಿದ್ಯಾರ್ಥಿನಿಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸದಲ್ಲೂ ಮುಂದಿದ್ದಾರೆ. ಆದರೆ ಶಾಲಾ ಕಾಲೇಜಿಗೆ ತೆರಳುವಾಗ ಶಿಕ್ಷಣದ ಮೇಲೆ ಗಮನವಿರಬೇಕೇ ಹೊರತು ಧರ್ಮದ ಮೇಲಲ್ಲ. ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ, ಉದ್ಯೋಗದ ಮೇಲೆ ಗಮನಹರಿಸಬೇಕು. ಅದರ ಹೊರತು ಇತರ ಯಾವುದೇ ವಿಚಾರದಲ್ಲಿ ಪ್ರಲೋಭನೆಗೆ ಒಳಗಾಗಬಾರದು. ಹಿಜಾಬ್ ಅನಗತ್ಯ ವಿವಾದ, ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದ ಮೇಲೆ ಗಮನವಿಡಿ ಎಂದು ಹೇಳಲು ಬಯಸುತ್ತೇನೆ' ಎಂದು ಕೇರಳ ರಾಜ್ಯಪಾಲ ಆರೀಫ್ ಮಹಮ್ಮದ್ ಖಾನ್ ಹೇಳಿದ್ದಾರೆ.