ಅಜಾತಶತ್ರು ವಿಷ್ಣುದಾದಾ ಮೂರ್ತಿ ಕೆಡವಿದ ಆ 'ವಿಕೃತ ಶತ್ರು' ಯಾರು.?

ಮಾಗಡಿ ರಸ್ತೆಯ ಟೋಲ್‌ಗೇಟ್‌ ವೃತ್ತದಲ್ಲಿರುವ ಕನ್ನಡ ಚನಲಚಿತ್ರ ರಂಗದ ಹಿರಿಯ ನಟ, ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್‌ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಕೃತ್ಯದ ವಿರುದ್ಧ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ ಹಲವು ನಟರು ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ. 28): ಮಾಗಡಿ ರಸ್ತೆಯ ಟೋಲ್‌ಗೇಟ್‌ ವೃತ್ತದಲ್ಲಿರುವ ಕನ್ನಡ ಚನಲಚಿತ್ರ ರಂಗದ ಹಿರಿಯ ನಟ, ಸಾಹಸಸಿಂಹ ದಿ.ಡಾ.ವಿಷ್ಣುವರ್ಧನ್‌ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಕೃತ್ಯದ ವಿರುದ್ಧ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸೇರಿದಂತೆ ಹಲವು ನಟರು ಹಾಗೂ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಗಡಿ ರಸ್ತೆ ಮತ್ತು ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗಳು ಕೂಡುವ ಟೋಲ್‌ಗೇಟ್‌ ವೃತ್ತದಲ್ಲಿ ಡಾ.ವಿಷ್ಣುವರ್ಧನ್‌ ಸೇನಾ ಸಮಿತಿಯು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ದಿನ ಪ್ರತಿಮೆಯನ್ನು ಸ್ಥಾಪಿಸಿತ್ತು. ಆದರೆ ಈ ಪ್ರತಿಮೆ ಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ ಅಭಿಮಾನಿಗಳು ಪಟ್ಟು ಬಿಡದೆ ಪ್ರತಿಮೆ ಇಟ್ಟಿದ್ದರು. ಈಗ ಪ್ರತಿಮೆಯನ್ನು ಒಡೆದುರುಳಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟನಿಗೆ ಇದೆಂಥಾ ಅವಮಾನ..? ಏನಿದರ ಹಿಂದಿನ ಹಕೀಕತ್ತು.? ಇಲ್ಲಿದೆ ಇನ್‌ಸೈಡ್ ಅಪ್‌ಡೇಟ್ಸ್..!

Related Video