ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಭೇಟಿ ಬಳಿಕ ಸುಧಾಕರ್ ಪ್ರತಿಕ್ರಿಯಿಸಿದ್ದು ಹೀಗೆ

ಹುಣಸೋಡು ದುರಂತ ಮಾಸುವ ಮುನ್ನ ಇನ್ನೊಂದು ಜಿಲೆಟಿನ್ ಸ್ಫೋಟ ದುರಂತ ಸಂಭವಿಸಿದೆ. ನಿನ್ನೆ ತಡರಾತ್ರಿ ಇಲ್ಲಿನ ಗ್ರಾನೈಟ್ ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ. 6 ಮಂದಿ ಮೃತಪಟ್ಟಿದ್ದಾರೆ.  ಸ್ಥಳಕ್ಕೆ ಉಸ್ತುವಾರಿ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

First Published Feb 23, 2021, 9:16 AM IST | Last Updated Feb 23, 2021, 9:44 AM IST

ಬೆಂಗಳೂರು (ಫೆ. 23): ಹುಣಸೋಡು ದುರಂತ ಮಾಸುವ ಮುನ್ನ ಇನ್ನೊಂದು ಜಿಲೆಟಿನ್ ಸ್ಫೋಟ ದುರಂತ ಸಂಭವಿಸಿದೆ. ನಿನ್ನೆ ತಡರಾತ್ರಿ ಇಲ್ಲಿನ ಗ್ರಾನೈಟ್ ಕ್ವಾರಿಯಲ್ಲಿ ಜಿಲೆಟಿನ್ ಸ್ಫೋಟಗೊಂಡಿದೆ. 6 ಮಂದಿ ಮೃತಪಟ್ಟಿದ್ದಾರೆ.  ಸ್ಥಳಕ್ಕೆ ಉಸ್ತುವಾರಿ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಗುಡಿಬಂಡೆ ಕ್ರಷರ್ ಜಿಲೆಟಿನ್ ಬ್ಲಾಸ್ಟ್: ಸ್ಥಳಕ್ಕೆ ಸುಧಾಕರ್ ಭೇಟಿ

'ಅತ್ಯಂತ ದುರಾದೃಷ್ಟಕರ ಘಟನೆ. ನಮ್ಮ ಪೊಲೀಸರು ನಿನ್ನೆ, ಮೊನ್ನೆ ಈ ಭಾಗದಲ್ಲಿ ಪರಿಶೀಲನೆ ನಡೆಸಿದ್ದಾರೆ. ಅವರು ಬಂದು ಹೋದ ಮೇಲೆ ಜಿಲೆಟಿನ್‌ನ್ನು ಅಕ್ರಮವಾಗಿ ಸಾಗಿಸುವಾಗ ಈ ದುರಂತ ನಡೆದಿದೆ. 6 ಜನರು ಮೃತಪಟ್ಟಿರುವವರಲ್ಲಿ ಒಬ್ಬರು ಇಲ್ಲಿನ ಸ್ಥಳೀಯರು. ಮೂವರು ಆಂಧ್ರದವರು, ಒಬ್ಬರು ನೇಪಾಳದವರು' ಎಂದಿದ್ದಾರೆ.