ಬೆಡ್, ವೆಂಟಿಲೇಟರ್, ಆಕ್ಸಿಜನ್ ಕೊರತೆಯಾಗದಂತೆ ಶೀಘ್ರ ವ್ಯವಸ್ಥೆ: ಡಾ. ಸುಧಾಕರ್ ಭರವಸೆ

 ದಿನದಿಂದ ದಿನಕ್ಕೆ ಐಸಿಯು ಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಎಂಬ ದೂರು ಹೆಚ್ಚಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

First Published Apr 23, 2021, 11:15 AM IST | Last Updated Apr 23, 2021, 11:15 AM IST

ಬೆಂಗಳೂರು (ಏ. 23): ದಿನದಿಂದ ದಿನಕ್ಕೆ ಐಸಿಯು ಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್ ಸಿಗುತ್ತಿಲ್ಲ, ಬೆಡ್ ಸಿಗುತ್ತಿಲ್ಲ ಎಂಬ ದೂರು ಹೆಚ್ಚಾಗುತ್ತಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. 

2 ನೇ ಅಲೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಂ... ಬೆಚ್ಚಿಬಿತ್ತು ವೈದ್ಯಲೋಕ...!

'ಸಿಎಂ ಜೊತೆ ಚರ್ಚಿಸಿದ್ದೇವೆ. ಬೆಂಗಳೂರಿನಲ್ಲಿ ವಾರದೊಳಗೆ ಕನಿಷ್ಠ 2 ಸಾವಿರ ಐಸಿಯು ಬೆಡ್‌ಗಳನ್ನು ಮೇಕ್ ಶಿಫ್ಟ್ ಹಾಸ್ಪಿಟಲ್ ಅಂತ ಮಾಡುತ್ತಿದ್ದೇವೆ. 100 ಬೆಡ್, ವೆಂಟಿಲೇಟರ್ ಅಳವಡಿಸಿರುತ್ತೇವೆ. 2 ಸಾವಿರ ಬೆಡ್‌ಗಳಲ್ಲಿ 800- 1000 ವೆಂಟಿಲೇಟರ್ ಅಳವಡಿಸಿದ್ದೇವೆ. ರೆಮಿಡೀಸ್‌ವೀರ್ ಕೊರತೆ ನೀಗಿಸಲು ವಿದೇಶದಿಂದ 2 ಲಕ್ಷ ತರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸದಾನಂದಗೌಡರ ಜೊತೆಗೂ ಮಾತನಾಡಿದ್ದೇನೆ. ಆದಷ್ಟು ಬೇಗ ಎಲ್ಲ ಸಮಸ್ಯೆ ಬಗೆಹರಿಸುತ್ತೇವೆ' ಎಂದು ಭರವಸೆ ನೀಡಿದ್ದಾರೆ. 

Video Top Stories