ಜು. 19 ರಂದು ಸಿದ್ದು, ಡಿಕೆಶಿ ದೆಹಲಿಗೆ, ‘ಮುಂದಿನ ಸಿಎಂ’ ವಿವಾದಕ್ಕೆ ಬ್ರೇಕ್‌ ಸಂಭವ

- ಸಿದ್ದು, ಡಿಕೆಶಿ ನಾಳೆ ಸಂಜೆ ದೆಹಲಿಗೆ- ರಾಜ್ಯ ರಾಜಕಾರಣ ಚರ್ಚೆಗೆ ಹೈಕಮಾಂಡ್‌ ಬುಲಾವ್‌- ಜು. 19 ರ ಸಂಜೆ 4ಕ್ಕೆ ಇಬ್ಬರ ಜತೆಗೂ ರಾಗಾ ಮಾತುಕತೆ- ಒಳಬೇಗುದಿ ಶಮನ, ಪದಾಧಿಕಾರಿಗಳ ನೇಮಕ ಚರ್ಚೆ 

Share this Video
  • FB
  • Linkdin
  • Whatsapp

ಬೆಂಗಳೂರು (ಜು. 18): ರಾಜ್ಯ ರಾಜಕಾರಣ ಕುರಿತು ಚರ್ಚಿಸಲು ಹೈಕಮಾಂಡ್‌ ಬುಲಾವ್‌ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಸಂಜೆ ದೆಹಲಿಗೆ ತೆರಳಲಿದ್ದಾರೆ.

ರಾಜ್ಯ ಕಾಂಗ್ರೆಸ್‌ನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ!

ಮಂಗಳವಾರ ಸಂಜೆ 4ಕ್ಕೆ ಉಭಯ ನಾಯಕರನ್ನು ಸಭೆಗೆ ಆಹ್ವಾನಿಸಲಾಗಿದೆ. ಉಭಯ ನಾಯಕರೊಂದಿಗೆ ಮೊದಲು ಪ್ರತ್ಯೇಕವಾಗಿ ಚರ್ಚೆ ನಡೆಯಲಿದೆ. ಈ ಚರ್ಚೆ ನಂತರ ಉಭಯ ನಾಯಕರೊಂದಿಗೂ ಒಗ್ಗೂಡಿ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ. ಮುಂದಿನ ಮುಖ್ಯಮಂತ್ರಿ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಬಣಗಳ ನಡುವೆ ನಡೆದಿರುವ ಪೈಪೋಟಿಗೆ ಹೈಕಮಾಂಡ್‌ ವರಿಷ್ಠರು ಈ ಸಂದರ್ಭದಲ್ಲಿ ಬ್ರೇಕ್‌ ಹಾಕುವ ಸಾಧ್ಯತೆಯಿದೆ. 

Related Video