ಬಂಡೆ ‘ಪವರ್ ಶೇರಿಂಗ್’ ಬಾಂಬ್, ಕೈ ಪಾಳಯದಲ್ಲಿ ಅಲ್ಲೋಲ ಕಲ್ಲೋಲ!
ಕಾಂಗ್ರೆಸ್ ಕೋಟೆಯೊಳಗೆ ಸಿಎಂ ಸಿಂಹಾಸನಕ್ಕಾಗಿ ಕಿಚ್ಚು ಹೊತ್ತಿಕೊಂಡಿದ್ರು, ಅಬ್ಬರದ ಸಮಾವೇಶವೊಂದು ನಡೆದಿದೆ. ಹಾಸನದಲ್ಲಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಮಾಡೋ ಮೂಲಕ ತಮ್ಮ ಕಾರ್ಯಕರ್ತರಿಗೆ ಹೊಸ್ ಜೋಶ್ ತುಂಬಿಸಿದ್ದಾರೆ
ಹಾಸನ: 'ಸಿದ್ದು ಸಿಂಹಾಸನಕ್ಕೆ ನಾನೇ ಕಟ್ಟಪ್ಪ' ಕೈ ಸಮಾವೇಶದಲ್ಲಿ ಡಿಕೆ ವೀರಾವೇಶ. ಅಲ್ಲಿ ಒಗ್ಗಟ್ಟು, ಇಲ್ಲಿ ಬಿಕ್ಕಟ್ಟು. ಏನಿದರ ಗುಟ್ಟು? ಸಿದ್ದು-ಡಿಕೆ ವಿರುದ್ಧ ‘ಪರಮ’ ಕೋಪ. ತಟ್ಟಿತಾ ತಾಪ? ಒಪ್ಪಂದದ ಮಾತಿಗೆ ಸಿಡಿದು ನಿಂತ ಗೃಹಸಚಿವರು. ಬಂಡೆ ಹೊತ್ತಿಸಿದ ಕಿಡಿಗೆ ಒಡೆದ ಮನೆ ಆಯ್ತಾ ಕೈ ಕೋಟೆ? ‘ಸಿಎಂ ಮಾತೇ ಶಾಸನ’ ಎಂದಿದ್ದ ಡಿ.ಕೆ.ಶಿವಕುಮಾರ್ ಮತ್ತೆ ಮಾತು ಬದಲಿಸಿದ್ರಾ?
ಒಪ್ಪಂದದ ಮಾತು. ಬೆಂಬಲದ ಭರವಸೆ. ಹೇಗಿದೆ ಗೊತ್ತಾ ಕನಕಪುರ ಬಂಡೆಯ ಚಾಣಾಕ್ಷ ನಡೆ? ಸಿದ್ದು-ಡಿಕೆ ಸಿಂಹಾಸನ ಸಂಘರ್ಷದಿಂದ ಒಗ್ಗಟ್ಟು ಕಳೆದುಕೊಳ್ತಾ ಕೈ ಪಡೆ? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒಡೆಯಿತಾ ಒಗ್ಗಟ್ಟು.