ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಎಂದ ಸೈನಿಕ.. ಬಂಡೆ ಮೌನ ಸಮ್ಮತಿ?

ಚನ್ನಪಟ್ಟಣ ಕ್ಷೇತ್ರದಲ್ಲಿ ಸೋಲು ಕಂಡು ಘಾಸಿಯಾಗಿರುವ ಜೆಡಿಎಸ್‌ ಪಕ್ಷಕ್ಕೆ ಗಾಯದ ಮೇಲೆ ಬರೆ ಎಳೆಯಲು ಡಿಕೆ ಶಿವಕುಮಾರ್‌ ಹಾಗೂ ಸಿಪಿ ಯೋಗೇಶ್ವರ್‌ ಮುಂದಾಗಿದ್ದಾರೆ.
 

First Published Nov 27, 2024, 1:04 PM IST | Last Updated Nov 27, 2024, 1:04 PM IST

ಬೆಂಗಳೂರು (ನ.27): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಂಡ ಸೋಲು ಜೆಡಿಎಸ್ ಪಕ್ಷವನ್ನ ಘಾಸಿಗೊಳಿಸಿದೆ. ಸೋಲಿನ ನೋವು ಮರೆಯುವ ಮುನ್ನವೇ ಕಾಂಗ್ರೆಸ್‌ ಶಾಸಕ ಸಿಪಿ ಯೋಗೇಶ್ವರ್‌ ಆಡಿರುವ ಮಾತುಗಳು ಜೆಡಿಎಸ್‌ಗೆ ಬರೆ ಎಳೆದಂತಾಗಿದೆ.

'ಟಾಸ್ಕ್ ಕೊಟ್ಟರೆ ಆಪರೇಷನ್ ಜೆಡಿಎಸ್‌ಗೆ ಸೈ' ಎಂದು ಸೈನಿಕ ಹೇಳಿರುವುದೇ ಜೆಡಿಎಸ್‌ ಆಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವೆ ಉಪಚುನಾವಣೆ ಗೆಲುವಿನ ಬೆನ್ನಲ್ಲಿಯೇ ಡಿಕೆ-ಯೋಗಿ ಜೋಡಿ ಆಪರೇಷನ್‌ ಹಸ್ತಕ್ಕೆ ಚಾಲನೆ ನೀಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

ಕಮಲ ಕೋಟೆಯಲ್ಲಿ ಧಗಧಗಿಸುತ್ತಿದೆ ಭಿನ್ನಮತದ ಬೆಂಕಿ..!

ನಿಖಿಲ್ ಸೋಲಿನೊಂದಾಗಿ ದಳ ಪಾಳಯದಲ್ಲಿ ತಲ್ಲಣ ಶುರುವಾಗಿದೆ. ಜೆಡಿಎಸ್‌ ಕೋಟೆ ಕೆಡವಲು ದೊಡ್ಡ ಪ್ಲ್ಯಾನ್‌ ಸಿದ್ದವಾಗ್ತಿದ್ಯಾ ಎನ್ನುವ ಅನುಮಾನ ಬಂದಿದೆ. ದಳಪತಿ ವಿರುದ್ಧ ಸಿಡಿದ ಜಿ.ಟಿ ದೇವೇಗೌಡ ಕೈಗೆ ಹತ್ತಿರವಾಗುತ್ತಾರಾ? ಜನ್ಮದಿನದಂದೇ ಜಿಟಿಡಿಗೆ ಸಿಎಂ ಸಿದ್ದು ಖುದ್ದು ಕರೆ ಮಾಡಿರುವುದು ಈ ಅನುಮಾನ ಬರೋದಕ್ಕೆ ಕಾರಣವಾಗಿದೆ.