ಇದು ನೋಡಿ ಸಾಮಾಜಿಕ ನ್ಯಾಯ; 31 ವರ್ಷದ ಹಿಂದಿನ ಕೇಸ್‌ಗೆ ಜೈಲು, ಪೊಲೀಸ್‌ ಸ್ಟೇಷನ್‌ ಸುಟ್ಟವರು ಅಮಾಯಕರು!

ನಮ್ಮದು ಸಾಮಾಜಿಕ ನ್ಯಾಯದ ಸರ್ಕಾರ ಎನ್ನುತ್ತಲೇ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರ, ಓಲೈಕೆ ರಾಜಕಾರಣಕ್ಕೆ ಇಳಿದಿದ್ಯಾ ಎನ್ನುವ ಅನುಮಾನ ಈ ಎರಡೂ ಪ್ರಕರಣಗಳು ತಾಳೆ ಹಾಕಿದಾಗ ಖಂಡಿತಾ ಬರುತ್ತದೆ.
 

First Published Jan 6, 2024, 11:34 PM IST | Last Updated Jan 6, 2024, 11:34 PM IST

ಬೆಂಗಳೂರು (ಜ.6): ಇನ್ನೇನು ರಾಮ ಮಂದಿರ ಉದ್ಘಾಟನೆ ಆಗಲು ಕೆಲವೇ ದಿನಗಳಿವೆ. ಈ ಹಂತದಲ್ಲಿ ಕರಸೇವಕರಿಗೆ ಎಚ್ಚರಿಕೆ ಮುಟ್ಟಿಸುವ ಅರ್ಥದಲ್ಲಿ ರಾಜ್ಯ ಸರ್ಕಾರ 31 ವರ್ಷದ ಹಿಂದಿನ ಕೇಸ್‌ನಲ್ಲಿ ಕರಸೇವಕ ಶ್ರೀಕಾಂತ್‌ ಪೂಜಾರಿಯನ್ನು ಬಂಧಿಸಿತ್ತು ಜಾಮೀನು ಪಡೆದುಕೊಂಡಿದ್ದ ಅವರು ಹುಬ್ಬಳ್ಳಿ ಜೈಲಿನಿಂದ ಶನಿವಾರ ಬಿಡುಗಡೆಯಾಗಿದ್ದಾರೆ.

ಇನ್ನೊಂದೆಡೆ ಮೂರು ವರ್ಷಗಳ ಹಿಂದೆ ಪೊಲೀಸರ ಕಣ್ಣೆದುರಲ್ಲಿಯೇ ಇಡೀ ಪೊಲೀಸ್‌ ಠಾಣೆಯನ್ನು ಅವರ ವಾಹನಗಳನ್ನು ಸುಟ್ಟಿ ಹಾಕಿದ್ದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ವ್ಯಕ್ತಿಗಳು ಅಮಾಯಕರು ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಹೇಳಿದ್ದಾರೆ. ಇನ್ನು ಡಿಸಿಎಂ ಡಿಕೆ ಶಿವಕುಮಾರ್‌ ಶೀಘ್ರದಲ್ಲೇ ಅವರು ಬಿಡುಗಡೆಯೂ ಆಗುತ್ತಾರೆ ಎಂದು ಸೂಚನೆ ನೀಡಿದ್ದಾರೆ.

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆಕೋರರು ಅಮಾಯಕರು: ಜೈಲಿಂದ ಬಿಟ್ಟುಬಿಡಿ ಎಂದ ಕಾಂಗ್ರೆಸ್ ಶಾಸಕ ಶ್ರೀನಿವಾಸ್

ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡುತ್ತೇವೆ ಎಂದೇ ಅಧಿಕಾರ ಹಿಡಿದಿದ್ದ ಕಾಂಗ್ರೆಸ್‌ ಸರ್ಕಾರ ಒಂದು ವರ್ಗದ ಓಲೈಕೆ ಮಾಡುತ್ತಿದ್ಯಾ ಎನ್ನುವ ಅನುಮಾನ ಕಾಡದೇ ಇರದು. ಈಗಾಗಲೇ ಸಾಕಷ್ಟು ಹಿಂದೂ ಕಾರ್ಯಕರ್ತರ ಹಳೇ ಕೇಸ್‌ಗಳನ್ನು ಓಪನ್‌ ಮಾಡಿಸಿರುವ ಸರ್ಕಾರ, ಜನರ ಕಣ್ಣೆದುರೇ ನಡೆದ ದೊಂಬಿಯಲ್ಲಿ ಆರೋಪಿಗಳ ಪರವಾಗಿ ನಿಂತಿದೆ.

Video Top Stories