ನಿನ್ನಿಂದಾಗಿ ಅಪ್ಪ ಜೈಲಿನಲ್ಲಿದ್ದಾನೆ, ಇದಕ್ಕೆಲ್ಲಾ ನೀನೆ ಕಾರಣ: ದಿವ್ಯಾಳ ನಿಂದಿಸಿದ ಮಕ್ಕಳು!

‘ಎಲ್ಲಾ ನಿನ್ನಿಂದಲೇ ಆಗಿದ್ದು, ನಮ್ಮಪ್ಪ ಜೈಲಿಗೆ ಹೋಗಿದ್ದು ನಿನ್ನಿಂದಲೇ’ ಎಂದು ದಿವ್ಯಾಳನ್ನು(Divya hagaragi) ಕಂಡು ಆಕೆಯ ಮಕ್ಕಳು ಕಣ್ಣೀರಿಟ್ಟ ಪ್ರಸಂಗ ಸಿಐಡಿ (CID) ಕಚೇರಿ ಆವರಣದಲ್ಲಿ ನಡೆದಿದೆ. 

Share this Video
  • FB
  • Linkdin
  • Whatsapp

ಕಲಬುರಗಿ (ಮೇ. 03): ‘ಎಲ್ಲಾ ನಿನ್ನಿಂದಲೇ ಆಗಿದ್ದು, ನಮ್ಮಪ್ಪ ಜೈಲಿಗೆ ಹೋಗಿದ್ದು ನಿನ್ನಿಂದಲೇ’ ಎಂದು ದಿವ್ಯಾಳನ್ನು(Divya hagaragi) ಕಂಡು ಆಕೆಯ ಮಕ್ಕಳು ಕಣ್ಣೀರಿಟ್ಟ ಪ್ರಸಂಗ ಸಿಐಡಿ (CID) ಕಚೇರಿ ಆವರಣದಲ್ಲಿ ನಡೆದಿದೆ. 

ತಮ್ಮಮ್ಮನನ್ನು ಕಾಣಲು ಮಾಮಾ ಜೊತೆಗೆ ಬಂದಿದ್ದ ದಿವ್ಯಾಳ ಇಬ್ಬರು ಗಂಡು ಮಕ್ಕಳು ಆಕೆ ಕಚೇರಿಯಿಂದ ಹೊರಬರುತ್ತಿದ್ದಂತೆಯೇ ಭಾವುಕರಾದರು. ದೊಡ್ಡ ಮಗನಂತೂ(12 ವರ್ಷ) ಎಲ್ಲಾ ನಿನ್ನಿದಂಲೇ ಆಗಿದ್ದು, ಅಪ್ಪ ಜೈಲಿಗೆ ಹೋಗಿದ್ದು ಎಂದು ಬಿಕ್ಕಿ ಅಳಲಾರಂಭಿಸಿದ. ದಿವ್ಯಾ ಪರಾರಿಯಾದ ದಿನದಿಂದ ಹಿಡಿದು ಇಲ್ಲಿಯವರೆಗೂ ವಿಜಯಪುರದಲ್ಲಿರು ಆಕೆಯ ಬಂಧುಗಳೊಂದಿಗೆ ಈ ಮಕ್ಕಳಿದ್ದರು. ಮಕ್ಕಳೊಂದಿಗೆ ಸಹೋದರ ದಿವ್ಯಾಳ ಭೇಟಿಗೆ ಬಂದಾಗ ಈ ಘಟನೆ ನಡೆಯಿತು.

Related Video