ಅಂತರಾಷ್ಟ್ರೀಯ ಯೋಗ ದಿನದಂದು ಮೈಸೂರಿಗೆ ಮೋದಿ, ಪ್ರಮೋದಾದೇವಿ ಒಡೆಯರ್, ಯದುವೀರ್‌ಗೆ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಜೂನ್ 21 ವಿಶ್ವ ಯೋಗ ದಿನದಂದು ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನ ಅರಮನೆ ಆವರಣದಲ್ಲಿ ಯೋಗಾಭ್ಯಾಸ ನಡೆಯಲಿದೆ. ಯೋಗದಿನ ಕಾರ್ಯಕ್ರಮದ ಬಳಿಕ ಮೈಸೂರು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್‌ ಅವರ ಆಹ್ವಾನದ ಮೇರೆಗೆ ಬೆಳಗ್ಗಿನ ಉಪಾಹಾರದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ 

Share this Video
  • FB
  • Linkdin
  • Whatsapp

ಮೈಸೂರು (ಜೂ. 19): ಪ್ರಧಾನಿ ನರೇಂದ್ರ ಮೋದಿ ಜೂನ್ 21 ವಿಶ್ವ ಯೋಗ ದಿನದಂದು (Yoga Day) ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನ ಅರಮನೆ ಆವರಣದಲ್ಲಿ ಯೋಗಾಭ್ಯಾಸ ನಡೆಯಲಿದೆ. ಯೋಗದಿನ ಕಾರ್ಯಕ್ರಮದ ಬಳಿಕ ಮೈಸೂರು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್‌ ಅವರ ಆಹ್ವಾನದ ಮೇರೆಗೆ ಬೆಳಗ್ಗಿನ ಉಪಾಹಾರದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. 

ಮಹಾಕಾಳಿಯ ಭವ್ಯ ಮಂದಿರ ಉದ್ಘಾಟನೆ, ತಾಯಿಯ 100 ನೇ ಹುಬ್ಬಹಬ್ಬದಂದೇ ಮೋದಿ ಮಹತ್ಕಾರ್ಯ!

ಮೈಸೂರು ಜಿಲ್ಲಾಡಳಿತ ವತಿಯಿಂದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರನ್ನು ಅಂತರಾಷ್ಟ್ರೀಯ ಯೋಗ ದಿನಾಚರಣೆ - 2022 ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಶಾಸಕರಾದ ಎಸ್ ಎ ರಾಮದಾಸ್ ರವರು, ಶ್ರೀ ಎಲ್ ನಾಗೇಂದ್ರ ರವರು , ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷ ಶ್ರೀ ಹೆಚ್ ವಿ ರಾಜೀವ್ ಜಿಲ್ಲಾಧಿಕಾರಿಗಳಾದ ಡಾ ಬಗಾದಿ ಗೌತಮ್, ಪಾಲಿಕೆ ಆಯುಕ್ತರಾದ ಲಕ್ಷ್ಮೀಕಾಂತ್ ರೆಡ್ಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related Video