Asianet Suvarna News Asianet Suvarna News

ಶಾಸಕರಿಗೆ ಆಯೋಜಿಸಿದ್ದ ಭೋಜನಕೂಟ ದಿಢೀರ್ ರದ್ದು; ಬಿಜೆಪಿಯಲ್ಲಿ ಅಚ್ಚರಿ ಬೆಳವಣಿಗೆ

ಈ ತಿಂಗಳ 25 ರಂದು ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರನೆ ರದ್ದುಗೊಳಿಸಿರುವ ಬೆನ್ನಲ್ಲೇ ಇದೀಗ ಶಾಸಕರ ಭೋಜನ ಕೂಟವನ್ನೂ ರದ್ದುಗೊಳಿಸಲಾಗಿದೆ.  

First Published Jul 21, 2021, 3:45 PM IST | Last Updated Jul 21, 2021, 3:55 PM IST

ಬೆಂಗಳೂರು (ಜು. 21):  ಈ ತಿಂಗಳ 25 ರಂದು ನಿಗದಿಯಾಗಿದ್ದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ದಿಢೀರನೆ ರದ್ದುಗೊಳಿಸಿರುವ ಬೆನ್ನಲ್ಲೇ ಇದೀಗ ಶಾಸಕರ ಭೋಜನ ಕೂಟವನ್ನೂ ರದ್ದುಗೊಳಿಸಲಾಗಿದೆ.

ಹೈ ಕಮಾಂಡ್ ಬುಲಾವ್: ದಿಡೀರ್ ದೆಹಲಿಗೆ ತೆರಳಿದ ಶ್ರೀ ರಾಮುಲು  

ಜುಲೈ 25 ರ ಶಾಸಕಾಂಗ ಸಭೆ, ಭೋಜನಕೂಟ, ರಾಜಕೀಯ ಬದಲಾವಣೆಗೆ ಸಾಕ್ಷಿಯಾಗುತ್ತದೆ ಎಂದು ಬಿಂಬಿಸಲಾಗಿತ್ತು. ಇದೀಗ ದಿಧೀರ್ ರದ್ದು ಮಾಡಿರುವುದರಿಂದ ನಾಯಕತ್ವ ಬದಲಾವಣೆಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆಯಾ..? ಎಂಬ ಅನುಮಾನ ಹುಟ್ಟುಹಾಕಿದೆ.