Asianet Suvarna News

ದೇಶದಲ್ಲಿ ಡೆಲ್ಟಾ + ವೈರಾಣು ಸೋಂಕಿತರ ಸಂಖ್ಯೆ 40 ಕ್ಕೆ ಏರಿಕೆ

Jun 24, 2021, 12:54 PM IST

ಬೆಂಗಳೂರು (ಜೂ. 24): 3 ನೇ ಅಲೆಗೆ ಕಾರಣವಾಗಬಹುದು ಎನ್ನುವ ಆತಂಕ ಹುಟ್ಟು ಹಾಕಿರುವ ಡೆಲ್ಟಾ ಪ್ಲಸ್ ಕೊರೋನಾ ರೂಪಾಂತರಿ ವೈರಸ್ ದೇಶದಲ್ಲಿ 40 ಜನರಲ್ಲಿ ದೃಢಪಟ್ಟಿದೆ. ಕರ್ನಾಟಕ ಸೇರಿ 8 ರಾಜ್ಯಗಳಿಗೆ ಸೊಂಕು ಹಬ್ಬಿದೆ. 3 ರಾಜ್ಯದಲ್ಲಿ ಪ್ರಸರಣ ತೀವ್ರಗೊಂಡಿದೆ. ತೀವ್ರ ನಿಗಾ, ಕಟ್ಟು ನಿಟ್ಟಿನ ಕ್ರಮಕ್ಕೆ ಕೇಂದ್ರ ಸೂಚನೆ ನೀಡಿದೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 6, ಕೇರಳದಲ್ಲಿ 3, ತಮಿಳುನಾಡಿನಲ್ಲಿ 3, ಕರ್ನಾಟಕದಲ್ಲಿ 2 ಪ್ರಕರಣಗಳು ದಾಖಲಾಗಿದೆ. 

ಬೆಂಗಳೂರಿನ ವೃದ್ದರೊಬ್ಬರಲ್ಲಿ ಡೆಲ್ಟಾ ವೈರಸ್ ಪತ್ತೆ