ಬಿಜೆಪಿ ಸರ್ಕಾರ ಅಮಾಯಕರ ಮೇಲೆ ಕೇಸ್‌ ಹಾಕಿದೆ: ಡಿಸಿಎಂ ಡಿಕೆ ಶಿವಕುಮಾರ್‌

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಬೆಂಗಳೂರಿಗೆ ಬೆಂಕಿ ಹಚ್ಚಿದವರ ಬೆನ್ನಿಗೆ ನಿಂತಿದ್ದಾರಾ ಎನ್ನುವ ಅನುಮಾನ ಕಾಡಿದೆ. ಅವರ ಹೇಳಿಕೆಯನ್ನು ಕೇಳಿದ್ರೆ ಇದು ನಿಜ ಅನಿಸೋದಂತೂ ಸತ್ಯ.
 

Share this Video
  • FB
  • Linkdin
  • Whatsapp

ಬೆಂಗಳೂರು (ಜು.26): ರಾಜ್ಯ ರಾಜಧಾನಿ ಬೆಂಗಳೂರಿಗೆ ಬೆಂಕಿ ಹಚ್ಚಿದವರ ಬೆನ್ನಿಗೆ ಸ್ವತಃ ಡಿಕೆ ಶಿವಕುಮಾರ್‌ ನಿಂತಿದ್ದಾರೆ ಎನ್ನುವ ಅನುಮಾನ ಬರುವಂಥ ಹೇಳಿಕೆಯನ್ನು ಅವರು ನೀಡಿದ್ದಾರೆ. ಬಿಜೆಪಿ ಸರ್ಕಾರ ಗಲಭೆಯ ವೇಳೆ ಅಮಾಯಕರ ಮೇಲೆ ಕೇಸ್‌ ಹಾಕಿದೆ ಎಂದು ಡಿಕೆಶಿ ಹೇಳಿದ್ದಾರೆ.

ಬೆಂಗಳೂರು, ಹುಬ್ಬಳ್ಳಿ, ಶಿವಮೊಗ್ಗದಲ್ಲೂ ಅಮಾಯಕರ ಮೇಲೆ ಕೇಸ್‌ ಹಾಕಲಾಗಿದೆ. ಗಲಭೆ ಮಾತ್ರವಲ್ಲ ಹೋರಾಟ ಮಾಡಿದವರ ಮೇಲೂ ಕೇಸ್‌ ಹಾಕಲಾಗಿದೆ. ನನ್ನ ಮೇಲೂ ಅವರು ಕೇಸ್‌ ದಾಖಲಿಸಿದ್ದರು ಎಂದು ಹೇಳಿದ್ದಾರೆ.

'ದೇವಸ್ಥಾನದ ಎದುರಲ್ಲೇ ಹಿಂದುಗಳನ್ನ ನೇಣಿಗೆ ಹಾಕ್ತೇವೆ' ಕೇರಳ ಮುಸ್ಲಿಂ ಲೀಗ್‌ ಜಾಥಾದಲ್ಲಿ ಘೋಷಣೆ!

ಗೃಹ ಸಚಿವ ಪರಮೇಶ್ವರ್‌ ಅವರು ಬರೆದಿರುವ ಪತ್ರದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದಿರುವ ಅವರು, ಎಷ್ಟೋ ಕಡೆ ಅಮಾಯಕರ ಕಡೆ ಕೇಸ್‌ ಹಾಕಿದ್ದಾರೆ. ರಾಜಕೀಯವಾಗಿ ಯಾರೆಲ್ಲಾ ವಿರೋಧ ಮಾಡ್ತಾರೋ ಅವರೆಲ್ಲರ ಮೇಲೂ ಕೇಸ್‌ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

Related Video