
ಫ್ರೀ ರೀಚಾರ್ಜ್‌ಗಾಗಿ ಲಿಂಕ್ ಒತ್ತಿದರೆ ನಿಮ್ಮ ಖಾತೆ ಹಣ ಮಾಯ, ಸಿದ್ದರಾಮಯ್ಯ ಹೆಸರಲ್ಲಿ ವಂಚನೆ
ಸಿಎಂ ಸಿದ್ದರಾಮಯಯ್ ಹೆಸರಿನಲ್ಲಿ 749 ರೂಪಾಯಿ ಉಚಿತ ರೀಚಾರ್ಜ್ ಎಂದು ಲಿಂಕ್ ಒಂದು ಹರಿದಾಡುತ್ತಿದೆ. ಈ ಲಿಂಕ್ ಒತ್ತಿದರೆ ನಿಮ್ಮ ಖಾತೆ ಹಣವೇ ಮಾಯವಾಗಲಿದೆ.
ಬಾಗಲಕೋಟೆ(ಜ.13) ರಾಜ್ಯದಲ್ಲಿ ಇತ್ತೀಚಿಗೆ ಆನ್ಲೈನ್ ದೋಖಾ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಸೈಬರ್ ವಂಚಕರು ಸಿಎಂ ಸಿದ್ದರಾಮಯ್ಯ ಪೋಟೋವನ್ನೇ ಬಳಸಿಕೊಂಡು ಜನರನ್ನ ವಂಚಿಸ್ತಿದ್ದಾರೆ. ಬಾಗಲಕೋಟೆಯಲ್ಲಿ ಮೊಬೈಲ್ ಟು.. ಮೊಬೈಲ್ ಪಾಸ್ ಆಗ್ತಿರೋದು ಫೇಕ್ ಲಿಂಕ್. ಮತ್ತೊಂದೆಡೆ ಫೇಕ್ ಲಿಂಕ್ ಓಪನ್ ಮಾಡಿದ್ರೆ ಪ್ರತ್ಯಕ್ಷವಾಗೋ ಸಿದ್ದರಾಮಯ್ಯ ಪೋಟೋ.. ಆನ್ಲೈನ್ ವಂಚಕರು 749 ರೂ.ಗಳ ಉಚಿತ ರೀಚಾರ್ಜ್ ಎಂದು ಸಿಎಂ ಪೋಟೋ ಬಳಸಿ ಫೇಕ್ ಲಿಂಕ್ ಕ್ರಿಯೆಟ್ ಮಾಡಿದ್ದು, ವ್ಯಾಟ್ಸಪ್ ಗ್ರೂಪ್ಗಳಿಗೆ ಹರಿಬಿಟ್ಟಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ