
Hijab Verdict ಹೈಕೋರ್ಟ್ ತೀರ್ಪನ್ನು ಟೀಕಿಸುವುದು ದೊಡ್ಡ ಅಪರಾಧ, ಜೈಲಿಗಟ್ಟುವ ಅಧಿಕಾರ ನ್ಯಾಯಾಲಯಕ್ಕಿದೆ!
- ಹಿಜಾಬ್ ತೀರ್ಪು ಕುರಿತು ಮುಸ್ಲಿಂ ಸಮುದಾಯಗಳಿಂದ ಟೀಕೆ
- ನ್ಯಾಯಾಂಗ ನಿಂದನೆ ಮಾಡುವುದು ಅತೀ ದೊಡ್ಡ ಅಪರಾಧ
- ಹಿರಿಯ ಅಡ್ವೋಕೇಟ್ ಬಿವಿ ಆಚಾರ್ಯ ಅಭಿಪ್ರಾಯ
ಕರ್ನಾಟಕ ಹೈಕೋರ್ಟ್ ನೀಡಿದ ಹಿಜಾಬ್ ತೀರ್ಪನ್ನು ಮುಸ್ಲಿಮ್ ಸಮುದಾಯ, ಮುಸ್ಲಿಂ ಸಂಘಟನೆಗಳು ಒಪ್ಪಿಕೊಂಡಿಲ್ಲ. ಇಷ್ಟೇ ಅಲ್ಲ ಕೋರ್ಟ್ ತೀರ್ಪಿನ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿದೆ. ಕೋರ್ಟ್ ಕೇವ ತೀರ್ಪು ನೀಡಿದೆ ನ್ಯಾಯ ನೀಡಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ.ಇತ್ತ ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಲಾಗಿದೆ. ಇದು ನ್ಯಾಯಾಂಗ ನಿಂದನೆಯಾಗಿದೆ. ಇಂತವರನ್ನು ಜೈಲಿಗಟ್ಟುವ ಅಧಿಕಾರ ಕೂಡ ಕೋರ್ಟ್‌ಗಿದೆ ಎಂದು ಹಿರಿಯ ಅಡ್ವೋಕೇಟ್ ಬಿವಿ ಆಚಾರ್ಯ ಹೇಳಿದ್ದಾರೆ.