ಸಕ್ರಿಯ ಸೋಂಕಿತರಲ್ಲಿ ಕರ್ನಾಟಕ ದೇಶದಲ್ಲೇ ನಂ 2; ಮೈಮರೆತರೆ ಅಪಾಯ ನಿಶ್ಚಿತ

ಕೊರೊನಾ ಎಂಬ ಮಹಾಮಾರಿ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ. ಅನ್‌ಲಾಕ್‌ ಬಳಿಕ ಜನರು ಎಚ್ಚರ ತಪ್ಪಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಮತ್ತೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಬೇಕಾಗುತ್ತದೆ. 

First Published Oct 1, 2020, 10:48 AM IST | Last Updated Oct 1, 2020, 10:48 AM IST

ಬೆಂಗಳೂರು (ಅ. 01): ಕೊರೊನಾ ಎಂಬ ಮಹಾಮಾರಿ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ. ಅನ್‌ಲಾಕ್‌ ಬಳಿಕ ಜನರು ಎಚ್ಚರ ತಪ್ಪಿದ್ದಾರೆ. ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ ಮತ್ತೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನವೆಂಬರ್‌ವರೆಗೆ ಸೋಂಕು ಕಡಿಮೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ಸಕ್ರಿಯ ಸೋಂಕಿತರಲ್ಲಿ ದೇಶದಲ್ಲಿಯೇ ಕರ್ನಾಟಕ ನಂಬರ್ 2 ಸ್ಥಾನದಲ್ಲಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ. ನಿನ್ನೆ ಒಂದೇ ದಿನ 87 ಮಂದಿ ಸಾವನ್ನಪ್ಪಿದ್ಧಾರೆ. ಹಾಗಾಗಿ ನಾವೆಲ್ಲರೂ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. 

ಕೋವಿಡ್ ಹೆಸರಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಕೋಟಿ ಕೋಟಿ ಲೂಟಿ; ಆರೋಗ್ಯ ಸಚಿವರೇ ಉತ್ತರಿಸಿ