Karnataka Covid 19 Relief: ಕೋವಿಡ್‌-19 ಕೇಸ್ ಹೆಚ್ಚಳ, ಆಸ್ಪತ್ರೆಗೆ ದಾಖಲಾತಿ ತೀರಾ ಕಡಿಮೆ

ಒಂದೆಡೆ ರಾಜ್ಯಾದ್ಯಂತ ಕೋವಿಡ್‌-19 ಪ್ರಕರಣಗಳು  ಹೆಚ್ಚಾಗುತ್ತಿದೆ ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿವೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯಕ್ಕೆ ಮೂರನೇ ಅಲೆಯ ತೀವ್ರತೆಯ ಆತಂಕ ಇಲ್ಲ.

Share this Video
  • FB
  • Linkdin
  • Whatsapp

ಬೆಂಗಳೂರು(ಜ.15): ಒಂದೆಡೆ ರಾಜ್ಯಾದ್ಯಂತ ಕೋವಿಡ್‌-19 ಪ್ರಕರಣಗಳು ಹೆಚ್ಚಾಗುತ್ತಿದೆ ಆದರೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿವೆ. ಇದು ಕರ್ನಾಟಕಕ್ಕೆ ಗುಡ್‌ನ್ಯೂಸ್ ಎಂದೇ ಹೇಳಬಹುದು. ಎರಡು ವಾರಗಳ ಆಸ್ಪತ್ರೆ ದಾಖಲಾತಿಯ ಅಂಕಿಅಂಶ ನೋಡಿದರೆ ಆತಂಕ ಕೊಂಚ ದೂರವಾಗುತ್ತಿದೆ. ಸದ್ಯದ ಪರಿಸ್ಥಿತಿ ನೋಡಿದರೆ ರಾಜ್ಯಕ್ಕೆ ಮೂರನೇ ಅಲೆಯ ತೀವ್ರತೆಯ ಆತಂಕ ಇಲ್ಲ. ಐಸಿಯು ಬೆಡ್‌ಗಳು, ಆಕ್ಸಿಜನ್ ಬೆಡ್‌ಗಳಿಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ರಾಜ್ಯ ಸರಕಾರ ಇನ್ನೂ ಎರಡು ವಾರಗಳ ತನಕ ಕಾದು ಮುಂದಿನ ತೀರ್ಮಾನ ಕೈಗೊಳ್ಳಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Ballari Schools Closed: ಬಳ್ಳಾರಿಯಲ್ಲಿ ಶಾಲೆಗಳು ಕಾಲೇಜುಗಳು ಬಂದ್, ರಾತ್ರಿ 8 ರಿಂದಲೇ ನೈಟ್ ಕರ್ಫ್ಯೂ

ಕೇಸ್‌ಗಳ ಸಂಖ್ಯೆ ಕಡಿಮೆ ಇದ್ದರೂ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿರುವುದಿಂದ ಮೂರನೇ ಅಲೆಯಿಂದ ರಾಜ್ಯ ಸೇಫ್ ಝೋನ್‌ನಲ್ಲಿದೆ ಎನ್ನಲಾಗುತ್ತಿದೆ. ರಾಜ್ಯದ ಒಟ್ಟಾರೆ ಕೊರೊನಾ ಪ್ರಕರಣಗಳು 1,41,337. ಆಸ್ಪತ್ರೆಗೆ ದಾಖಲಾದವರ ಸಂಖ್ಯೆ ಕೇವಲ 2,195 ಆಕ್ಸಿಜನ್ /ಹೆಚ್‌ಡಿಯು ಬೆಡ್‌ಗೆ ದಾಖಲಾದವರ ಸಂಖ್ಯೆ 538 ಮಾತ್ರ, ಇನ್ನು ಐಸಿಯುಗೆ ದಾಖಲಾದವರ ಸಂಖ್ಯೆ 105, ಜನರಲ್‌ ಬೆಡ್ ಗೆ ದಾಖಲಾದವರ ಸಂಖ್ಯೆ 1,157. ಹೀಗಾಗಿ ಇನ್ನೆರಡು ವಾರ ರಾಜ್ಯ ಕಾದು ನೋಡಲಿದೆಯಂತೆ. ಹೀಗಿದ್ದರೂ ಜನತೆ ಮೈಮರೆಯುವುದು ಬೇಡ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ.

Related Video