ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್ ಆಗಿದೆ ಚಿಕ್ಕಪೇಟೆ
ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್ ಆಗಿದೆ.
ಬೆಂಗಳೂರು (ಜೂ. 24): ಕೊರೊನಾ ಡೆಡ್ಲಿ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು ರಾಜಧಾನಿಯ ನಿದ್ದೆಗೆಡಿಸಿದೆ. ಜೂನ್‌ನಲ್ಲಿ ಕೇಸ್‌ಗಳು ಹೆಚ್ಚಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು. ಅದರಂತೆ ಜೂನ್‌ನಲ್ಲಿ ಮಿತಿ ಮೀರುತ್ತಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಅತೀ ಹೆಚ್ಚು ಕೇಸ್‌ಗಳು ಪತ್ತೆಯಾಗುತ್ತಿದ್ದು, ಅಲ್ಲಿನ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಲಾಕ್‌ಡೌನ್ ಮಾಡಿದ್ದಾರೆ. ಇಲ್ಲಿನ ಏಳು ವಾರ್ಡ್‌ಗಳು ಹೆಚ್ಚು ಡೇಂಜರ್ ಆಗಿದೆ.
ಮಾಗಡಿ ಆಯ್ತು, ರಾಮನಗರವೂ ಲಾಕ್‌ಡೌನ್; ಅಂಗಡಿ ತೆರೆಯುವುದಕ್ಕೂ ಟೈಂ ಲಿಮಿಟ್
ಚಿಕ್ಕಪೇಟೆಯಲ್ಲಿ ಇದುವರೆಗೆ ಇದುವರೆಗೂ 120 ಕೇಸ್‌ಗಳು ಪತ್ತೆಯಾಗಿದ್ದು ಮೂವರಿಗೆ ಮಾತ್ರ ಅಂತರಾಜ್ಯ ಪ್ರವಾಸದ ಹಿನ್ನಲೆಯಿದೆ. ಉಳಿದ 117 ಸೋಂಕಿತರು ಸ್ಥಳೀಯರು. ಇನ್ನೂ ಆತಂಕಕಾರಿ ಮಾಹಿತಿ ಏನೆಂದರೆ 5 ವಾರ್ಡ್‌ನ 47 ಸೋಂಕಿತರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಕೊರೊನಾ ಹೇಗೆ ಬಂತು, ಎಲ್ಲಿಂದ ಬಂತು ಅನ್ನೋದೇ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಈ ಡೆಡ್ಲಿ ವೈರಸ್ ರಾಜಧಾನಿಯ ನಿದ್ದೆಗೆಡಿಸಿರುವುದಂತೂ ಹೌದು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!