ಕೊರೋನಾತಂಕದ ನಡುವೆಯೇ ಪ್ರತಿಭಟನೆಗಿಳಿದ ಕೊರೋನಾ ವಾರಿಯರ್ಸ್..!

ನೌಕರಿ ಖಾಯಂ ಬೇಡಿಕೆ ಇಡದಂತೆ ಷರತ್ತಿನೊಂದಿಗೆ ಗುತ್ತಿಗೆ ವೈದ್ಯರ ಸಂಬಳವನ್ನು 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಮಾಡಿದೆ. ಸರ್ಕಾರದ ನಿರ್ಧಾರಕ್ಕೆ ಗುತ್ತಿಗೆ ವೈದ್ಯರ ಸಂಘ ಬೇಸರವನ್ನು ವ್ಯಕ್ತಪಡಿಸಿದೆ.

Share this Video
  • FB
  • Linkdin
  • Whatsapp

ಬೆಂಗಳೂರು(ಜು.03): ಒಂದು ಕಡೆ ಕೊರೋನಾ ಹೆಮ್ಮಾರಿ ಆತಂಕ ಹುಟ್ಟುಹಾಕುತ್ತಿರುವ ಬೆನ್ನಲ್ಲೇ ಕೊರೋನಾ ವಾರಿಯರ್ಸ್‌ಗಳು ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ತಮ್ಮನ್ನು ಖಾಯಂಗೊಳಿಸುವಂತೆ ಗುತ್ತಿಗೆ ವೈದ್ಯರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರತಿಭಟನೆಯಿಂದ ಎಚ್ಚೆತ್ತುಕೊಂಡ ಸರ್ಕಾರ, ನೌಕರಿ ಖಾಯಂ ಬೇಡಿಕೆ ಇಡದಂತೆ ಷರತ್ತಿನೊಂದಿಗೆ ಗುತ್ತಿಗೆ ವೈದ್ಯರ ಸಂಬಳವನ್ನು 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಮಾಡಿದೆ. ಸರ್ಕಾರದ ನಿರ್ಧಾರಕ್ಕೆ ಗುತ್ತಿಗೆ ವೈದ್ಯರ ಸಂಘ ಬೇಸರವನ್ನು ವ್ಯಕ್ತಪಡಿಸಿದೆ.

ಖಾಯಂ ಬೇಡಿಕೆ ಇಡ್ಬೇಡಿ ಎಂದು ಗುತ್ತಿಗೆ ವೈದ್ಯರ ವೇತನ ಹೆಚ್ಚಿಸಿದ ಸರ್ಕಾರ!

ಮುಂದುವರೆದು ಸಂಬಳಕ್ಕಿಂತ ಕೆಲಸದ ಭದ್ರತೆ ಮುಖ್ಯ ಎಂದು ಸಂಬಳ ಹೆಚ್ಚಳವನ್ನು ವೈದ್ಯರ ಸಂಘ ತಿರಸ್ಕಾರ ಮಾಡಿದೆ. ಒಂದು ವೇಳೆ ಸರ್ಕಾರ ಗುತ್ತಿಗೆ ವೈದ್ಯರನ್ನು ಮಾಡಿಲ್ಲ ಎಂದರೆ ಜುಲೈ 08ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video