Asianet Suvarna News Asianet Suvarna News

ಸ್ಯಾಂಪಲ್ ಕೊಡದಿದ್ರೂ ವರದಿ ಪಾಸಿಟಿವ್; ದಂಧೆಗಿಳಿದಿದೆಯಾ ಆರೋಗ್ಯ ಇಲಾಖೆ?

ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್, ನೆಗೆಟಿವ್ ವರದಿಯಲ್ಲಿ ಎಡವಟ್ಟಾಗಿರುವುದನ್ನು ನೋಡಿದ್ದೇವೆ. ಅವಾಂತರವಾಗಿರುವುದನ್ನು ನೋಡಿದ್ದೇವೆ. ಆದರೆ ಅರೋಗ್ಯ ಇಲಾಖೆ ಸಿಬ್ಬಂದಿಯೇ ಇಂತದ್ದೊಂದು ಕೆಲಸಕ್ಕೆ ಇಳಿದರೆ? ಹೌದು. ಆರೋಗ್ಯ ಇಲಾಖೆ ಇಂತಹ ಕೆಲಸಕ್ಕೆ ಕೈ ಹಾಕಿರುವುದು ಪತ್ತೆಯಾಗಿದೆ. 

ಬೆಂಗಳೂರು (ಅ. 01): ಕೊರೊನಾ ಟೆಸ್ಟ್‌ನಲ್ಲಿ ಪಾಸಿಟಿವ್, ನೆಗೆಟಿವ್ ವರದಿಯಲ್ಲಿ ಎಡವಟ್ಟಾಗಿರುವುದನ್ನು ನೋಡಿದ್ದೇವೆ. ಅವಾಂತರವಾಗಿರುವುದನ್ನು ನೋಡಿದ್ದೇವೆ. ಆದರೆ ಅರೋಗ್ಯ ಇಲಾಖೆ ಸಿಬ್ಬಂದಿಯೇ ಇಂತದ್ದೊಂದು ಕೆಲಸಕ್ಕೆ ಇಳಿದರೆ? ಹೌದು. ಆರೋಗ್ಯ ಇಲಾಖೆ ಇಂತಹ ಕೆಲಸಕ್ಕೆ ಕೈ ಹಾಕಿರುವುದು ಪತ್ತೆಯಾಗಿದೆ. 

ಮತ್ತೆ ಲಾಕ್‌ಡೌನ್ ಬೇಕಾ? ನಿಮ್ಮ ಜಿಲ್ಲೆಯ ರಿಯಾಲಿಟಿ ಚೆಕ್ ಇದು!

ಸ್ಯಾಂಪಲ್‌ ಕೊಡದೆಯೇ ಪಾಸಿಟಿವ್ ವರದಿ ನೀಡಿದೆ ಆರೋಗ್ಯ ಇಲಾಖೆ. ಮೂವರು ಯುವತಿಯರು ಬನಶಂಕರಿ ಮೆಟ್ರೋ ಬಳಿ ಹೋದಾಗ ಅಲ್ಲಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಅವರ ಫೋನ್ ನಂಬರ್ ಪಡೆಯುತ್ತಾರೆ. ಟೆಸ್ಟ್ ಮಾಡಿಸಿಕೊಳ್ಳಿ ಎನ್ನುತ್ತಾರೆ. ಅದಕ್ಕೆ ಯುವತಿಯರು ಒಪ್ಪದೇ ಅಲ್ಲಿಂದ ಬರುತ್ತಾರೆ. ಕೆಲ ದಿನಗಳ ನಂತರ ನಿಮಗೆ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡುತ್ತದೆ. ಇದೆಂಥಾ ವಿಚಿತ್ರ ನೋಡಿ. ಸ್ಯಾಂಪಲ್ ಕೊಡದೆಯೇ ಪಾಸಿಟಿವ್ ವರದಿ ಬಂದಿದೆ. 

Video Top Stories