ಹಿಂದ ಹೋರಾಟಕ್ಕೆ ವಿರೋಧ: ಸಿದ್ದರಾಮಯ್ಯ ನೇತೃತ್ವದಲ್ಲೇ ಕುರುಬರ ಸಮಾವೇಶ
ಕುರುಬರ ಸಮಾವೇಶಕ್ಕೆ ಕಾಂಗ್ರೆಸ್ ಪ್ಲಾನ್| ಸಿದ್ದು ನೇತೃತ್ವದಲ್ಲೇ ಮಾ. 21 ಎಂದು ಸಮಾವೇಶ| ಕಲಬುರಗಿಯಲ್ಲಿ ನಡೆಯಲಿರುವ ಕುರುಬರ ಸಮಾವೇಶ| ಹಿಂದ ಸಮಾವೇಶಕ್ಕೆ ಪಕ್ಷದ ಹಿರಿಯರಿಂದ ವಿರೋಧ|
ಕಲಬುರಗಿ(ಫೆ.18): ಕುರುಬರ ಸಮಾವೇಶಕ್ಕೆ ಕಾಂಗ್ರೆಸ್ ಪ್ಲಾನ್ ಮಾಡಿದೆ ಎಂದು ತಿಳಿದು ಬಂದಿದೆ. ಹೌದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಮಾ. 21 ಎಂದು ಕಲಬುರಗಿಯಲ್ಲಿ ಸಮಾವೇಶ ನಡೆಯಲಿದೆ. ಹಿಂದ ಸಮಾವೇಶವನ್ನ ಕೈಬಿಟ್ಟು, ಕುರುಬರ ಸಮಾವೇಶಕ್ಕೆ ಸಿದ್ದರಾಮಯ್ಯ ನೇತೃತ್ವ ವಹಿಸಲಿದ್ದಾರೆ. ಹಿಂದ ಸಮಾವೇಶಕ್ಕೆ ಪಕ್ಷದ ಹಿರಿಯರು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದ ಸಮಾವೇಶವನ್ನ ಸದ್ಯಕ್ಕೆ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.