ಚಿಕ್ಕ ಚಿಕ್ಕ ಮೀನುಗಳನ್ನು ಬಿಡಿ, ದೊಡ್ಡ ತಿಮಿಂಗಿಲಗಳನ್ನು ಹಿಡಿಯಿರಿ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಚಿಕ್ಕ ಚಿಕ್ಕ ಮೀನುಗಳನ್ನು ಹಿಡಿಯಬೇಡಿ. ದೊಡ್ಡ ದೊಡ್ಡ ತಿಮಿಂಗಿಲಗಳು ಬೆಂಗಳೂರಿನಲ್ಲಿವೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ (PSI Recruitment Scam) ಚಿಕ್ಕ ಚಿಕ್ಕ ಮೀನುಗಳನ್ನು ಹಿಡಿಯಬೇಡಿ. ದೊಡ್ಡ ದೊಡ್ಡ ತಿಮಿಂಗಿಲಗಳು ಬೆಂಗಳೂರಿನಲ್ಲಿವೆ (Bengaluru) ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge) ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ನಾಯಕಿ ದಿವ್ಯಾ ಹಾಗರಗಿ (Divya Hagaragi) ಕಲೆಕ್ಷನ್ ಏಜೆಂಟ್ ಮಾತ್ರ. ಆಕೆ ಮಾಡಿದ ಕಲೆಕ್ಷನ್ ಯಾರಿಗೆ ಹೋಗುತ್ತಿತ್ತು ಅದನ್ನು ಪತ್ತೆ ಹಚ್ಚಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ (Karnataka BJP Government) ಪ್ರಿಯಾಂಕ್ ಖರ್ಗೆ ಸವಾಲೆಸೆದಿದ್ದಾರೆ.
CID Notice: ಪ್ರಿಯಾಂಕ್ ಖರ್ಗೆ ಹಿಂದೆ ಪಕ್ಷ ಇದೆ, ಬೆದರಿಕೆಗೆ ಬಗ್ಗಲ್ಲ; ಸಿದ್ದರಾಮಯ್ಯ
ಈ ಹಿಂದೆ ಸಾಮಾಜಿಕ ಜಾಲತಾಣಗಳ (Social Media) ಮೂಲಕ ಸರ್ಕಾರಕ್ಕೆ ತಾಕತ್ತಿನ ಸವಾಲು ಹಾಕಿದ್ದ ಪ್ರಿಯಾಂಕ್ ಖರ್ಗೆ, 58 ಸಾವಿರ ಯುವಕರ ಭವಿಷ್ಯಕ್ಕಾಗಿ ಪ್ರತಿದಿನ ಸಿಐಡಿಗೆ (CID) ಉತ್ತರಿಸಲು ನಾನು ಸಿದ್ಧ! ಸರ್ಕಾರದ ಒತ್ತಡ ಮೆಟ್ಟಿ ನಿಲ್ಲಲು ನಾನು ಸಿದ್ಧ! ತಪ್ಪಿತಸ್ಥರಕ ವಿರುದ್ಧ ಸಾಕ್ಷಿ ಒದಗಿಸಲು ನಾನು ಸಿದ್ಧ! ಆದರೆ, ಕೋಟಿ ಕೋಟಿ ಲಂಚ ಹೊಡೆದ ಆರೋಪಿಗಳನ್ನು ಬಂಧಿಸುವ ತಾಕತ್ ಈ ಸರ್ಕಾರಕ್ಕೆ ಇದಿಯಾ? ಎಂದು ಪ್ರಶ್ನೆ ಮಾಡುವ ಮೂಲಕ ಸವಾಲು ಹಾಕಿದ್ದರು.