Mekedatu Padayatre: ಅರ್ಧಕ್ಕೆ ಮೊಟಕುಗೊಂಡ ಪಾದಯಾತ್ರೆ, ಗೆದ್ದಿದ್ಯಾರು.? ಸೋತಿದ್ಯಾರು.?

ಕೊರೋನಾ ಸೋಂಕು (Corona Virus) ಏರಿಕೆ, ಕರ್ಫ್ಯೂ ನಡುವೆಯೂ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ (Mekedatu Padayatre) ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೈಕೋರ್ಟ್‌ (High Court) ಕೂಡಾ ಛಾಟಿ ಬೀಸಿತ್ತು.  

Share this Video
  • FB
  • Linkdin
  • Whatsapp

ಬೆಂಗಳೂರು (ಜ. 14): ಕೊರೋನಾ ಸೋಂಕು (Corona Virus) ಏರಿಕೆ, ಕರ್ಫ್ಯೂ ನಡುವೆಯೂ ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ (Mekedatu Padayatre) ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೈಕೋರ್ಟ್‌ (High Court) ಕೂಡಾ ಛಾಟಿ ಬೀಸಿತ್ತು. ಹೈಕೋರ್ಟ್‌ನ ಕಟು ನುಡಿಗಳನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್‌ ಪಕ್ಷ ತನ್ನ ಮಹತ್ವಾಕಾಂಕ್ಷಿ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದೆ. 

Mekedatu Padayatra: ಕಾಂಗ್ರೆಸ್ ಪಾದಯಾತ್ರೆಯ ಒಳಸುಳಿ

ಕಾಂಗ್ರೆಸ್‌ ಹೈಕಮಾಂಡ್‌ (Congress HighCommand) ಈ ಹೋರಾಟದ ವಿಷಯದಲ್ಲಿ ಪಕ್ಷಕ್ಕೆ ಮುಜುಗರವಾಗದಂತಹ ನಿರ್ಧಾರ ಕೈಗೊಳ್ಳಿ ಎಂದು ರಾಜ್ಯ ನಾಯಕರಿಗೆ ಸೂಚ್ಯ ಸಂದೇಶ ರವಾನಿಸಿತ್ತು. ರಾಜ್ಯ ಸರ್ಕಾರ ಕೂಡ ಯಾತ್ರೆಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳುವ ಸಿದ್ಧತೆಗಳನ್ನು ನಡೆಸಿತ್ತು. ಜತೆಗೆ, ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿ ಕಾಂಗ್ರೆಸ್‌ ನಾಯಕರಿಗೆ ಪತ್ರವನ್ನು ಬರೆದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಹಿರಿಯ ನಾಯಕರು ಹಾಗೂ ಶಾಸಕರ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೈಗೊಂಡರು. ಹಾಗಾದರೆ ಈ ಯುದ್ಧದಲ್ಲಿ ಗೆದ್ದಿದ್ಯಾರು..? ಸೋತಿದ್ಯಾರು..? 

Related Video