ಯತೀಂದ್ರ ಸಿದ್ದರಾಮಯ್ಯ ಕುರ್ಚಿ ಆಕ್ರಮಿಸಿದ ಡಿಕೆ ಶಿವಕುಮಾರ್!
ಸದನದಲ್ಲೊಂದು ಹಾಸ್ಯ ಪ್ರಸಂಗ, ವಾಲ್ಮೀಕಿ ಮೂಡ ಹಗರಣ ಚರ್ಚೆಯಲ್ಲಿ ಅಶ್ವತ್ಥ್ ನಾರಾಯಣ, ಡಿಕೆಶಿ ವಾಗ್ವಾದ,ಕಾಂಗ್ರೆಸ್‌ಗೆ ತಟ್ಟಿದ ವಾಲ್ಮೀಕಿ ಹಗರಣ ಬಿಸಿ, ವಿಜಯೇಂದ್ರ ತೀವ್ರ ವಾಗ್ದಾಳಿ, ಮುಡಾ ಅಕ್ರಮ, ದೇವನೂರು ಬದಲು ವಿಜಯನಗರ ಬಡಾವಣೆಯಲ್ಲಿ ಸೈಟ್ ನೀಡಿದ್ದೇಕೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಪರಿಷತ್‌ನಲ್ಲೂ ವಾಲ್ಮೀಕಿ ಹಗರಣ, ಮೂಡ ಹಗರಣ ಗದ್ದಲ ಜೋರಾಗಿತ್ತು. ಈ ವೇಳೆ ಬೇರೊಬ್ಬರ ಕುರ್ಚಿಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಎದ್ದು ನಿಂತು ಮಾತನಾಡಿದ್ದನ್ನು ಬಿಜೆಪಿ ನಾಯಕರು ಆಕ್ಷೇಪಿಸಿದ್ದರು. ಈ ವೇಳೆ ಸ್ಪಷ್ಟನೆ ನೀಡಿದ ಯತೀಂದ್ರ, ನನ್ನ ಕುರ್ಚಿ ಖಾಲಿ ಇಲ್ಲ ಎಂದು ಉತ್ತರಿಸಿದ್ದಾರೆ. ಹೌದು, ಯತೀಂದ್ರ ಸಿದ್ದರಾಮಯ್ಯ ಕುರ್ಚಿಯಲ್ಲಿ ಡಿಕೆ ಶಿವಕುಮಾರ್ ಕುಳಿತಿದ್ದರು. ಈ ವಿವಾದ ಜೋರಾಗುತ್ತಿದ್ದಂತೆ ಡಿಕೆ ಶಿವಕುಮಾರ್ ಎದ್ದು ಹೊರಟು ಘಟನೆ ನಡೆದಿದೆ. ಡಿಕೆ ಶಿವಕುಮಾರ್ ಕುರ್ಚಿ ಬಿಟ್ಟು ತೆರಳುತ್ತಿದ್ದಂತೆ ಸಭೆ ನಗೆಗಡಲಲ್ಲಿ ತೇಲಾಡಿತ್ತು.