Asianet Suvarna News Asianet Suvarna News

ಕನಕಪುರ ತಮ್ಮನಿಗೆ ಬಿಟ್ಟು ಚನ್ನಪಟ್ಟಣ ಉಪ ಚುನಾವಣೆಗೆ ನಿಲ್ತಾರಾ ಡಿಕೆಶಿ?

ಚನ್ನಪಟ್ಟಣ ಉಪ ಚುನಾವಣೆ ಕಣಕ್ಕೆ ಧುಮುಕಲು ಸಜ್ಜಾದ ಡಿಕೆ ಶಿವಕುಮಾರ್, ಪಟ್ಟು ಬಿಗಿಗೊಳಿಸಲು ಸಜ್ಜಾಗ ಡಿಕೆ ಬ್ರದರ್ಸ್, ರೇಣುಕಾಸ್ವಾಮಿ ಕುಟುಂಬಕ್ಕೆ ನಾಯಕರ ಸಾಂತ್ವನ, ಕಣ್ಣೀರಿಟ್ಟ ಪೋಷಕರು, ದರ್ಶನ್ ಬಚಾವ್ ಮಾಡಲು ನಡೆಯಿತಾ ಪ್ಲಾನ್? ಎಸ್‌ಪಿಪಿ ಬದಲಾಯಿಸಲು ಒತ್ತಡ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಹೆಚ್‌ಡಿ ಕುಮಾರಾಸ್ವಾಮಿ ತಮ್ಮ ಚನ್ನಪಟ್ಟಣ ವಿಧಾನಸಭೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಉಪಚುನಾವಣೆ ಕಾವು ಜೋರಾಗಿದೆ. ಇದೀಗ ಕನಕಪುರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಚನ್ನಪಟ್ಟಣದಿಂದ ಡಿಕೆ ಶಿವಕುಮಾರ್ ಸ್ಪರ್ಧೆಗೆ ತಯಾರಿಗಳು ನಡೆಯುತ್ತಿದೆ ಅನ್ನೋ ಮಾತುಗಳ ಕೇಳಿಬರುತ್ತಿದೆ. ಕನಕಪುರ ಉಪ ಚುನಾವಣೆಯಲ್ಲಿ ಡಿಕೆ ಸುರೇಶ್ ಕಣಕ್ಕಿಳಿಸಿ ತಮ್ಮ ಪಟ್ಟು ಬಿಗಿಗೊಳಿಸಲು ಪ್ಲಾನ್ ನಡೆದಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ನಾಳೆಯಿಂದ ಚನ್ನಪಟ್ಟಣದ 14ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ.
 

Video Top Stories