
ಮಹಾಮಳೆ: ಸಿಎಂ ಉತ್ತರ ಕನ್ನಡ ಭೇಟಿ ದಿಢೀರ್ ರದ್ದು, ಜನರಿಗೆ ಅಸಮಾಧಾನ
ಮಹಾ ಮಳೆಯ ಆರ್ಭಟಕ್ಕೆ ರಾಜ್ಯ ತತ್ತರಿಸಿದೆ. 2 ನೇ ದಿನ ಉಡುಪಿ- ಮಂಗಳೂರು ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ ನೀಡಲಿದ್ದಾರೆ. ಮಣಿಪಾಲ ಡೀಸಿ ಕಚೇರಿಯಲ್ಲಿ ಸಿಎಂ ಮಹತ್ವದ ಸಭೆ ನಡೆಯಲಿದೆ.
ಕಾರವಾರ (ಜು. 13): ಮಹಾ ಮಳೆಯ ಆರ್ಭಟಕ್ಕೆ (Karnataka Rain) ರಾಜ್ಯ ತತ್ತರಿಸಿದೆ. 2 ನೇ ದಿನ ಉಡುಪಿ- ಮಂಗಳೂರು ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಸಿಎಂ (CM Bommai) ಭೇಟಿ ನೀಡಲಿದ್ದಾರೆ. ಮಣಿಪಾಲ ಡೀಸಿ ಕಚೇರಿಯಲ್ಲಿ ಸಿಎಂ ಮಹತ್ವದ ಸಭೆ ನಡೆಯಲಿದೆ.
ಭಾರಿ ಮಳೆಗೆ ಗುಜರಾತ್‌ನಲ್ಲಿ ಪ್ರವಾಹ, ಶಾಲಾ ಕಾಲೇಜಿಗೆ ರಜೆ, 7 ಸಾವು!
ಮಳೆ ಹಾನಿ ಪ್ರದೇಶಗಳ ಪರಿಶೀಲನೆ ಸಲುವಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ (Bhatkal) ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಬೇಕಿದ್ದ ಭೇಟಿ ದಿಢೀರ್ ರದ್ದಾಗಿದೆ. ‘ಮುಖ್ಯಮಂತ್ರಿಗಳು ತುರ್ತಾಗಿ ಬೆಂಗಳೂರಿಗೆ ತೆರಳಬೇಕಿರುವುದರಿಂದ ಭಟ್ಕಳ ಭೇಟಿ ರದ್ದಾಗಿದೆ. ಇನ್ನು 10 ದಿನಗಳ ಒಳಗಾಗಿ ಉತ್ತರ ಕನ್ನಡದ ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.