ಆರ್‌ಆರ್ ನಗರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಚಾಲನೆ, ಮುನಿರತ್ನಗೆ ಶಹಭ್ಭಾಸ್‌ಗಿರಿ..!
- ಆರ್.ಆರ್.ನಗರ: .361.81 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ
- ರಾಕ್ಷಸಿ ಹಳ್ಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ, ಮಲ್ಲತ್ತಹಳ್ಳಿ ಕೆರೆ ಅಭಿವೃದ್ಧಿಗೆ ಶಂಕು
ಬೆಂಗಳೂರು (ಅ. 04): ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸಿ ಇಡೀ ನಗರದ ಚಿತ್ರಣ ಬದಲಿಸಲು ಸರ್ಕಾರ ಬದ್ಧವಾಗಿದೆ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಪಾಲಿಕೆ ಅನುದಾನ ಸೇರಿದಂತೆ .361.81 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಕೆರೆ ಅಭಿವೃದ್ಧಿ, ಆಸ್ಪತ್ರೆ, ಆಟದ ಮೈದಾನ, ಈಜುಕೊಳ ಸೇರಿದಂತೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
81 ಕೋಟಿ ವೆಚ್ಚದ ಮಲ್ಲತ್ತಹಳ್ಳಿ ಕೆರೆ ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, .25 ಕೋಟಿ ವೆಚ್ಚದ ಲಗ್ಗೆರೆ ರಾಕ್ಷಸಿ ಹಳ್ಳ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡಾ. ಅಂಬರೀಶ್ ಈಜುಕೊಳ, ಡಾ. ರಾಜ್‌ಕುಮಾರ್ ಉದ್ಯಾನ, ಡಾ. ವಿಷ್ಣುವರ್ಧನ್ ಆಟದ ಮೈದಾನ ಸಮಗ್ರ ಅಭಿವೃದ್ಧಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದರು.