Asianet Suvarna News Asianet Suvarna News

ಪುನೀತ್ ಕಾರ್ಯಕ್ರಮದಲ್ಲಿ ಬೊಂಬೆ ಹೇಳುತೈತೆ ಹಾಡು ಹಾಡಿದ ಸಿಎಂ ಬೊಮ್ಮಾಯಿ!

ಪುನೀತ್ ರಾಜ್‌ಕುಮಾರ್ ಹೆಸರನ್ನು 12 ಕಿಲೋಮೀಟರ್ ಉದ್ದರ ರಸ್ತೆ ಇಡಲಾಗಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಬೊಂಬೆ ಹೇಳುತೈತೆ ಹಾಡು ಹಾಡಿದ್ದಾರೆ. ಬೊಮ್ಮಾಯಿ ಜೊತೆಗೆ ಸಚಿವ ಆರ ಅಶೋಕ್ ಕೂಡ ಹಾಡಿದ್ದಾರೆ. 

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಪಾಲಿಗೆ ದೇವರು. ಪುನೀತ್ ನಮ್ಮ ಜೊತೆಗಿಲ್ಲ ಅನ್ನೋ ನೋವು ಎಂದೂ ಮಾಸಲ್ಲ. ಆದರೆ ಅಪ್ಪು ಅವರ ನೆನಪಿನಲ್ಲಿ ಕನ್ನಡ ದನತೆ ಸಿಹಿ ಹಂಚುತ್ತಿದ್ದಾರೆ. ಇದೀಗ ಬೆಂಗಳೂರಿನ ನಾಯಂಡಹಳ್ಳಿ ಜಂಕ್ಷನ್‌ನಿದ ವೆಗಾ ಸಿಟಿ ಮಾಲ್ ಜಂಕ್ಷನ್ ವರೆಗಿನ 12 ಕಿಲೋಮೀಟರ್ ರಸ್ತೆಯನ್ನು ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಈ ಕಾರ್ಯಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಆರ್ ಅಶೋಕ್, ಸಂಸದ ತೇಜಸ್ವಿ ಸೂರ್ಯ, ರಾಜ್ ಕುಟುಂಬ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಸ್ಯಾಂಡಲ್‌‌ವುಡ್ ದಿಗ್ಗಜರು ಬೊಂಬೆ ಹೇಳುತೈತೆ ಹಾಡನ್ನು ಹಾಡಿದ್ದಾರೆ. ವೇದಿಕೆಯಲ್ಲಿ ಬೊಮ್ಮಾಯಿ, ಅಶೋಕ್ ಕೂಡ ಮೈಕ್ ಹಿಡಿದು ಬೊಂಬೆ ಹೇಳುತೈತೆ ಹಾಡು ಗುನುಗಿದರು.