ಹಿಂದೂ ಮಹಾಸಾಗರದ ಉಷ್ಣತೆಯಲ್ಲಿ ಭಾರೀ ಬದಲಾವಣೆ, ಮೀನುಗಳ ಮಾರಣಹೋಮ

ಭೌಗೋಳಿಕ ತಾಪಮಾನ‌ ಏರಿಕೆಯಿಂದ ಧ್ರುವ ಭಾಗಗಳಲ್ಲಿ ಮಂಜುಗಡ್ಡೆಗಳು ಕರಗುತ್ತಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇದರಿಂದಾಗಿ ಸಮುದ್ರದ ಮಟ್ಟವೂ ಏರಿಕೆಯಾಗುತ್ತಿದೆ. ಸರ್ವೆ ವರದಿ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಕರಾವಳಿ ಪ್ರದೇಶಗಳು ಮುಳುಗಡೆಯಾಗಲಿವೆ. 

Share this Video
  • FB
  • Linkdin
  • Whatsapp

ಮಂಗಳೂರು (ಅ. 06): ಹಿಂದೂ ಮಹಾಸಾಗರದ ಉಷ್ಣತೆಯಲ್ಲಿ ಭಾರೀ ಬದಲಾವಣೆ ಕಾಣಲಾರಂಭಿಸಿದೆ. ಈ ಬದಲಾವಣೆಯ ಕಾರಣದಿಂದ ರಾಶಿ ರಾಶಿ ಮೀನುಗಳು ಹಾಗೂ ಇತರ ಸಮುದ್ರ ಜೀವಿಗಳು ಸಾಯಲಾರಂಭಿಸಿವೆ. ಇದಕ್ಕೆ ಕಾರಣವಾಗಿರೋದು ಸಮುದ್ರಲ್ಲಿ ಏಕಾಏಕಿ ಕಾಣಿಸಿಕೊಂಡ ಭಾರೀ ಕೋಲ್ಡ್ ಅಂಡರ್‌ವಾಟರ್ ಕರೆಂಟ್‌.

ಐಸ್‌ಕ್ರೀಂ ಪ್ರಿಯರಿಗೆ ಗುಡ್‌ನ್ಯೂಸ್..! ಇಲ್ಲಿ ಸಿಗುತ್ತೆ ಐಸ್‌ಕ್ರೀಂ ಥಾಲಿ

ಈ ಕರೆಂಟ್‌ ಸ್ಪರ್ಶಕ್ಕೆ ಸಿಗುತ್ತಿದ್ದಂತೇ ಮೀನುಗಳು ಏಕಾಏಕಿ ಸಾವನ್ನಪ್ಪಿ ದಡಕ್ಕೆ ಬಂದು ಬೀಳುತ್ತವೆ. ಇತ್ತೀಚಿಗೆ ಹೊನ್ನಾವರದ ಕಡಲತೀರದಲ್ಲಿ 6 ಟನ್ ಮೀನುಗಳು ಬಂದು ಬಿದ್ದಿತ್ತು. ಕಾಸರಗೋಡು ಕಡಲತೀರದಲ್ಲೂ ರಾಶಿ ರಾಶಿ ಕೊಡ್ಡಾಯಿ ಮೀನುಗಳು ಬಿದ್ದಿತ್ತು. ಧ್ರುವಗಳಲ್ಲಿ ಕರಗಿದ ತಂಪು ನೀರು ಹಿಂದೂ ಮಹಾಸಾಗರಕ್ಕೆ ಸೇರಿದಾಗ ಉಷ್ಣ ವಾತಾವರಣದ ಮೀನುಗಳು ಕಡಲತೀರದಲ್ಲಿ ಪತ್ತೆಯಾಗುತ್ತವೆ. ಸರ್ವೆ ವರದಿ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ದೇಶದ ಕರಾವಳಿ ಪ್ರದೇಶಗಳು ಮುಳುಗಡೆಯಾಗಲಿವೆ. 

Related Video