News Hour: ಯೋಗೇಶ್ವರ್‌ಗೆ ಸೋಲಿನ ಭೀತಿ ತಂದ 'ಕರಿಯ..', ಜಮೀರ್‌ರನ್ನ ಸುಮ್ನೆ ಬಿಡ್ತಾರಾ?

ಚನ್ನಪಟ್ಟಣ ಉಪಚುನಾವಣೆಯ ಬಳಿಕ ರಿಸಲ್ಟ್‌ ಬಗ್ಗೆ ಕುತೂಹಲ ಆರಂಭವಾಗಿದೆ. ಇದರ ನಡುವೆ ಕಾಂಗ್ರೆಸ್‌ ಅಭ್ಯರ್ಥಿ ಸಿಪಿ ಯೋಗೇಶ್ವರ್‌ ಫಲಿತಾಂಶಕ್ಕೂ ಮುನ್ನವೇ ಸೋಲಿನ ಮಾತನಾಡಿದ್ದಾರೆ.
 

Share this Video
  • FB
  • Linkdin
  • Whatsapp

ಬೆಂಗಳೂರು (ನ.14): ಫಲಿತಾಂಶಕ್ಕೂ ಮುನ್ನವೇ ಸಿ.ಪಿ ಯೋಗೇಶ್ವರ್​ ಸೋಲಿನ ಮಾತಾಡಿದ್ದಾರೆ. ಜಮೀರ್ ಹೇಳಿಕೆಯಿಂದ ನಷ್ಟ ಎಂದು ನಿರಾಸೆ ತೋಡಿಕೊಂಡಿದ್ದಾರೆ. ಚನ್ನಪಟ್ಟಣದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ​ ವರ್ಕೌಟ್ ಆಯ್ತಾ ಎನ್ನುವ ಕುತೂಹಲ ಎದುರಾಗಿದೆ.

ಗುರುವಾರ ಮಾತನಾಡಿದ ಸಿಪಿ ಯೋಗೇಶ್ವರ್‌, ಜಮೀರ್‌ ಅವರ ಹೇಳಿಕೆಯಿಂದ ಕೆಲವು ಮತಗಳಿಗೆ ನಷ್ಟವಾಗಿದೆ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಯಾರೇ ಗೆದ್ದರೂ ಅದರ ಅಂತರ ತೀರಾ ಕಡಿಮೆಯಲ್ಲಿ ಇರಲಿದೆ ಎಂದು ಹೇಳಿದ್ದಾರೆ.

ಪರಸಂಗದ ಗೆಂಡೆತಿಮ್ಮ ಸಿನಿಮಾದ 'ಮರಕಣಿ' ರೀಟಾ ಅಂಚನ್‌ ನಿಧನ

ಇನ್ನೊಂದೆಡೆ ಕರ್ನಾಟಕ ರಾಜಕೀಯದಲ್ಲಿ 50 ಕೋಟಿ ಆಫರ್ ಹೇಳಿಕೆ ಕಿಚ್ಚೆಬ್ಬಿಸಿದೆ. ತನಿಖೆ ನಡೆಸಿ ಸಾಕ್ಷ್ಯ ಕೊಡಿ ಎಂದು ಬಿಜೆಪಿ ಸವಾಲ್ ಎಸೆದಿದೆ. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ನಿಜ ಎಂದು ಸಚಿವರ ಸಮರ್ಥನೆ ಮಾಡಿಕೊಂಡಿದ್ದಾರೆ.

Related Video