Night Curfew ಸಮಯ ಬದಲಾವಣೆ ಮಾಡಿ: ಉದ್ಯಮಿಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧಾರ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿಲ್ಲ. ಹೀಗಾಗಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂನ ಸರ್ಕಾರ ತೆರವುಗೊಳಿಸಿದೆ. ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಸಮಯ ವಿಸ್ತರಣೆ ಮಾಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ. 

First Published Jan 27, 2022, 12:31 PM IST | Last Updated Jan 27, 2022, 12:34 PM IST

ಬೆಂಗಳೂರು (ಜ.27): ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದರ ತೀವ್ರತೆ ಹೆಚ್ಚಾಗಿಲ್ಲ. ಹೀಗಾಗಿ ಜಾರಿಯಾಗಿದ್ದ ವೀಕೆಂಡ್ ಕರ್ಫ್ಯೂ (Weekend Curfew) ಸರ್ಕಾರ ತೆರವುಗೊಳಿಸಿದೆ. ಸದ್ಯ ನೈಟ್ ಕರ್ಫ್ಯೂ (Night Curfew) ಜಾರಿಯಲ್ಲಿದ್ದು, ಸಮಯ ವಿಸ್ತರಣೆ ಮಾಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಲು ಮುಂದಾಗಿವೆ. ರಾತ್ರಿ 11.30 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಮನವಿ ಸಲ್ಲಿಸಲು ವಿವಿಧ ವಲಯಗಳ ಉದ್ಯಮಿಗಳು ನಿರ್ಧರಿಸಿದ್ದಾರೆ.

Covid 3rd Wave: ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಕೊರೋನಾ ಕೇಸ್ ಹೆಚ್ಚಳ

ವಾರದ 7 ದಿನವೂ ಇದೇ ಸಮಯ ಜಾರಿಗೆ ಒತ್ತಾಯಿಸುತ್ತಿದ್ದು, ಈ ವಾರದಲ್ಲಿ ಉದ್ಯಮಿಗಳು ಮುಖ್ಯಮಂತ್ರಿಗೆ ಈ ಬಗ್ಗೆ ಭೇಟಿ ಮಾಡಿ ಮನವಿ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸದ್ಯ ರಾಜ್ಯದಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರವರೆಗೆ ನೈಟ್ ಕರ್ಫ್ಯೂ ಇದೆ. ಆದರೆ ಈ ಸಮಯವನ್ನು ಒಂದೂವರೆ ಗಂಟೆ ಮುಂದೂಡಿಕೆ ಮಾಡುವಂತೆ ಹೋಟೆಲ್ ಮಾಲೀಕರ ಸಂಘ, ಬಾರ್, ಪಬ್ ಆ್ಯಂಡ್ ರೆಸ್ಟೊರೆಂಟ್, ಕಲ್ಯಾಣ ಮಂಟಪದ ಮಾಲೀಕರು, ಥಿಯೇಟರ್ ಮಾಲೀಕರು, ಬೀದಿ ಬದಿ ವ್ಯಾಪಾರಿಗಳ ಸಂಘ, ಕ್ಯಾಟರಿಂಗ್ ಉದ್ಯಮದವರು ಸೇರಿದಂತೆ ಹಲವು ಸಂಘಟನೆಗಳಿಂದ ಸಿಎಂಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.