ಸೀಡಿ ಕೇಸ್‌ಗೆ ಮಹತ್ವದ ತಿರುವು, ಜಾರಕಿಹೊಳಿ ಬಂಧನ ಪಕ್ಕಾ.?
ಸೀಡಿ ಪ್ರಕರಣ ಸಂಬಂಧ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಸಿಆರ್‌ಪಿಸಿ ಸೆಕ್ಷನ್ 164 ರ ಅಡಿ ಹೇಳಿಕೆ ದಾಖಲಿಸಿದ್ದಾಳೆ. ಹೀಗಾಗಿ ಕೇಸ್ ಮಹತ್ವ ಪಡೆದಿದ್ದು, ಆರೋಪಿ ಬಂಧನ ಸಾಧ್ಯತೆಯೂ ಇದೆ.
ಬೆಂಗಳೂರು (ಮಾ. 31): ಸೀಡಿ ಪ್ರಕರಣ ಸಂಬಂಧ ಯುವತಿ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ ಸಿಆರ್‌ಪಿಸಿ ಸೆಕ್ಷನ್ 164 ರ ಅಡಿ ಹೇಳಿಕೆ ದಾಖಲಿಸಿದ್ದಾಳೆ. ಹೀಗಾಗಿ ಕೇಸ್ ಮಹತ್ವ ಪಡೆದಿದ್ದು, ಆರೋಪಿ ಬಂಧನ ಸಾಧ್ಯತೆಯೂ ಇದೆ. ಹಾಗಾದರೆ ಏನಿದು ಸಿಆರ್‌ಪಿಸಿ ಸೆಕ್ಷನ್ 164 ಎಂದು ನೋಡುವುದಾದರೆ, ಅಪರಾಧ ಪ್ರಕರಣಗಳಲ್ಲಿ ದೂರುದಾರರಾಗಲಿ ಅಥವಾ ಆರೋಪಿಯಾಗಲಿ ಮ್ಯಾಜಿಸ್ಪ್ರೇಟ್ ನ್ಯಾಯಾಧೀಶರ ಮುಂದೆ ಹಾಜರಾಗಿ ತಮ್ಮ ಪ್ರಮಾಣೀಕೃತ ಹೇಳಿಕೆ ದಾಖಲಿಸಲು ಅಪರಾಧ ದಂಡ ಪ್ರಕಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಸೆಕ್ಷನ್ 164 ಅವಕಾಶ ಕಲ್ಪಿಸುತ್ತದೆ. ಈ ಸೆಕ್ಷನ್ ಅಡಿಯಲ್ಲಿ ದಾಖಲಿಸಿದ ಹೇಳಿಕೆ ಪ್ರಕರಣದ ಅತ್ಯಂತ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲ್ಪಡುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಸಾಕಷ್ಟುಮಹತ್ವ ಹೊಂದಿರುತ್ತದೆ.
ಬೆಳಗಾವಿ ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಸೋತರೂ ಡಿಕೆಶಿಗೇ ಲಾಭ..!