ಉಲ್ಟಾ ಹೇಳಿಕೆ ವದಂತಿಗೆ ತೆರೆ ಎಳೆದ ಸೀಡಿ ಲೇಡಿ, ಮತ್ತೊಂದು ವಿಡಿಯೋ ರಿಲೀಸ್

ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗಿದ್ದು, ಸೀಡಿ ಲೇಡಿ ಎಸ್‌ಐಟಿ ಎದುರು ಉಲ್ಟಾ ಹೇಳಿಕೆ ನೀಡಿದ್ದಾಳೆ ಎಂಬ ವದಂತಿ ಚರ್ಚೆ ಗ್ರಾಸವಾಗಿತ್ತು. 

First Published Apr 13, 2021, 9:47 AM IST | Last Updated Apr 13, 2021, 9:47 AM IST

ಬೆಂಗಳೂರು (ಏ. 13): ರಮೇಶ್ ಜಾರಕಿಹೊಳಿ ಸೀಡಿ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ ಎನ್ನಲಾಗಿದ್ದು, ಸೀಡಿ ಲೇಡಿ ಎಸ್‌ಐಟಿ ಎದುರು ಉಲ್ಟಾ ಹೇಳಿಕೆ ನೀಡಿದ್ದಾಳೆ ಎಂಬ ವದಂತಿ ಚರ್ಚೆ ಗ್ರಾಸವಾಗಿತ್ತು. 

ಈ ಬಗ್ಗೆ ಯುವತಿ ಸ್ಪಷ್ಟನೆ ಕೊಟ್ಟಿದ್ದು, ನಾನು ಹನಿಟ್ರ್ಯಾಪ್ ಆರೋಪವನ್ನೂ ಮಾಡಿಲ್ಲ. ಉಲ್ಟಾ ಹೇಳಿಕೆಯನ್ನೂ ಕೊಟ್ಟಿಲ್ಲ. ನನ್ನ ಪೋಷಕರ ಜೊತೆ ಮಾತನಾಡಿದ್ದು ನಿಜ. ಹಾಗಂತ ಅವರು ನನ್ನ ಮನವೊಲಿಸಿಲ್ಲ. ಸೆಕ್ಷನ್ 164 ರ ಅಡಿ ಕೊಟ್ಟಿರುವ ಹೇಳಿಕೆಗೆ ಈಗಲೂ ಬದ್ಧ' ಎಂದು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟನೆ ನೀಡಿದ್ದಾರೆ.  
 

Video Top Stories