Asianet Suvarna News Asianet Suvarna News

ಡಿಕೆಶಿಗೆ ಸಿಬಿಐ ಶಾಕ್: 'ಇದು ಬಿಜೆಪಿಗರೇ ಉದ್ದೇಶಪೂರ್ವಕವಾಗಿ ನಡೆಸಿದ ದಾಳಿ'

Oct 5, 2020, 11:29 AM IST

ಬೆಂಗಳೂರು(ಅ.05): ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇದನ್ನು ಖಂಡಿಸಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಕಿಡಿ ಕಾರಿದ್ದಾರೆ.

'ಡಿಕೆಶಿ ಮನೆ ಮೇಲೆ ಮೋದಿ ಸರ್ಕಾರದ ದಾಳಿ ರಾಜಕೀಯ ದುಷ್ಟತನದ ಪರಮಾವಧಿ'

ಕಾಂಗ್ರೆಸ್ ಕಾರ್ಪೋರೇಟರ್ ಅಂಜಿನಪ್ಪ ಕೂಡಾ ಸಿಬಿಐ ದಾಳಿಯನ್ನು ಖಂಡಿಸುತ್ತಾ ಉಪ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ ಇದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಹೀಗಿರುವಾಗ ನಾಯಕರ ಗಮನವನ್ನು ಬೇರೆಡೆ ಹರಿಸಲು ವಿರೋಧ ಪಕ್ಷ, ಅದರಲ್ಲೂ ಬಿಜೆಪಿ ಈ ದಾಳಿಯನ್ನು ಉದ್ದೇಶಪೂರ್ವಕವಾಗಿ ನಡೆಸುತ್ತಿದೆ ಎಂದಿದ್ದಾರೆ.