News Hour: ಬುರ್ಖಾ ಧರಿಸಿ ಪ್ರತಿಭಟಿಸಿದ ವಾಟಾಳ್, ಇದು ಹೆಂಗಸರ ಸರ್ಕಾರ ಎಂದ ಹೋರಾಟಗಾರರು!
ಕಾವೇರಿಗಾಗಿ ಶುಕ್ರವಾರ ನಡೆದ ಕರ್ನಾಟಕ ಬಂದ್ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಕನ್ನಡ ಪರ ಹೋರಾಟಗಾರರು, ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಕಾವೇರಿಯನ್ನು ತಮಿಳುನಾಡಿಗೆ ಮಾರಿದೆ. ಇದೊಂದು ನೀತಿಗೆಟ್ಟ ಸರ್ಕಾರ ಎಂದು ಟೀಕೆ ಮಾಡಿದ್ದಾರೆ.
ಬೆಂಗಳೂರು (ಸೆ.29): ಇದು ಗಂಡಸರ ಸರ್ಕಾರವಲ್ಲ, ಇದು ಹೆಂಗಸರ ಸರ್ಕಾರ.. ನಮ್ಮ ಕಾವೇರಿಯನ್ನು ಈ ಸರ್ಕಾರ ತಮಿಳುನಾಡಿಗೆ ಮಾರಿದೆ... ಇದು ನೀತಿಗೆಟ್ಟ ಸರ್ಕಾರ.. ಹೀಗೆ ಕಾವೇರಿ ವಿಚಾರದಲ್ಲಿ ಅಸಡ್ಡೆ ತೋರಿದ ರಾಜ್ಯ ಸರ್ಕಾರದ ವಿರುದ್ಧಶುಕ್ರವಾರ ಕನ್ನಡ ಪರ ಸಂಘಟನೆಗಳ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.
ಕಾವೇರಿ ವಿಚಾರವಾಗಿ ಕಳೆದ ನಾಲ್ಕು ದಿನಗಳಲ್ಲಿ ಕರ್ನಾಟದಲ್ಲಿ 2ನೇ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಸೆ 26 ರಂದು ಬೆಂಗಳೂರು ಬಂದ್ ನಡೆದಿದದ್ದರೆ, ಶುಕ್ರವಾರ ಕರ್ನಾಟಕ ಬಂದ್‌ಗೂ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಯಿತು. ಹಿರಿಯ ಹೋರಾಟಗಾರ ಹಾಗೂ ಐದು ಬಾರಿಯ ಶಾಸಕ ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ಬುರ್ಖಾ ಧರಿಸಿ ಪ್ರತಿಭಟನೆ ನಡೆಸಿದರು.
ಸುಳ್ಳಾಡಬೇಡಿ, ಕರ್ನಾಟಕ ರೈತರ ಬೆನ್ನಿಗೆ ಚೂರಿ ಹಾಕಬೇಡಿ; ಸಿದ್ಧು ಸರ್ಕಾರದ ವಿರುದ್ಧರಾಜೀವ್ ಚಂದ್ರಶೇಖರ್ ಕಿಡಿ
ಶಿವರಾಜ್ ಕುಮಾರ್ ಅವರ ನೇತೃತ್ವದಲ್ಲಿ ಕನ್ನಡ ಚಿತ್ರರಂಗ ಕಾವೇರಿ ಹೋರಾಟದಲ್ಲಿ ಭಾಗಿಯಾಗಿತ್ತು. ಅನೇಕ ನಟ-ನಟಿಯರು ಈ ವೇಳೆ ಭಾಗಿಯಾಗಿದ್ದರು. ಅದರೊಂದಿಗೆ ಕರ್ನಾಟಕ ಬಂದ್‌ಗೆ ಸ್ಯಾಂಡಲ್‌ವುಡ್ ದೊಡ್ಡ ಮಟ್ಟದ ಸಾಥ್ ಕೊಟ್ಟಿದೆ.