'ನಾನು ದೆಹಲಿಗೆ ಹೋಗ್ತೀನಿ ಎಂದಿಲ್ಲ. ಹೋಗೋದು ಇಲ್ಲ. ಯಾರಿಗೆ ಹೇಳಬೇಕು, ಹೇಳಿದ್ದಾಗಿದೆ'

- ನಾನು ದೆಹಲಿಗೆ ಹೋಗ್ತೀನಿ ಎಂದಿಲ್ಲ. ಹೋಗೋದು ಇಲ್ಲ: ಆನಂದ್ ಸಿಂಗ್- 'ಬಿಎಸ್‌ವೈ ಜೊತೆ ರಾಜಕೀಯ ಚರ್ಚೆಗೆ ಹೀಗಿಲ್ಲ. ಅವರ ಆಶೀರ್ವಾದ ಪಡೆಯಲು ಹೋಗಿದ್ದೆ'- ಹೊಸಪೇಟೆಯಲ್ಲಿ ಕಚೇರಿ ಓಪನ್ 

Share this Video
  • FB
  • Linkdin
  • Whatsapp

ಬೆಂಗಳೂರು (ಆ. 13): 'ನಾನು ದೆಹಲಿಗೆ ಹೋಗ್ತೀನಿ ಎಂದಿಲ್ಲ. ಹೋಗೋದು ಇಲ್ಲ. ಏನು ಹೇಳಬೇಕು, ಯಾರಿಗೆ ಹೇಳಬೇಕು, ಹೇಳಿದ್ದಾಗಿದೆ' ಎಂದು ಹೊಸಪೇಟೆಯಲ್ಲಿ ಆನಂದ್ ಸಿಂಗ್ ಹೇಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಎಸ್‌ವೈ ಜೊತೆ ರಾಜಕೀಯ ಚರ್ಚೆಗೆ ಹೀಗಿಲ್ಲ. ಅವರ ಆಶೀರ್ವಾದ ಪಡೆಯಲು ಹೋಗಿದ್ದೆ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡಿದ್ದರು. ಸಿಎಂ ಬಳಿ ಮನವಿ ಮಾಡಿದ್ದೇನೆ. ಸಮಸ್ಯೆಯನ್ನು ಯಾವ ರೀತಿ ಬಗೆಹರಿಸುತ್ತಾರೆ ಕಾದು ನೋಡಬೇಕಿದೆ' ಎಂದಿದ್ದಾರೆ.

ಆನಂದ್ ಸಿಂಗ್ ಹೊಸಪೇಟೆ ಶಾಸಕರ ಕಚೇರಿ ಓಪನ್, ಸಂಧಾನ ಸಕ್ಸಸ್.?

ಖಾತೆ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ರಾಜೀನಾಮೆ ಬೆದರಿಕೆ ಹಾಕಿದ್ದರು. ಅದಕ್ಕೆ ಸಿಎಂ ಡೋಂಟ್ ಕೇರ್ ಎಂದಿದ್ದರು. ಖಾತೆ ಬದಲಾವಣೆಗೆ ಹೈಕಮಾಂಡ್ ಕೂಡಾ ಒಲವು ತೋರಿರಲಿಲ್ಲ. ಆನಂದ್ ಸಿಂಗ್ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗುತ್ತಾರೆ ಎನ್ನಲಾಗಿತ್ತು. 

Related Video