ಲಸಿಕೆ ಅಭಿಯಾನಕ್ಕೆ ಚಾಲನೆ, ಭರವಸೆಯ ಮಾತುಗಳನ್ನಾಡಿದ ಸಿಎಂ

ಲಸಿಕೆಗೆ ಚಾಲನೆ ನೀಡಿದ ಬಳಿಕ ಸಿಎಂ ಮಾಧ್ಯಮಗಳನ್ನುದ್ದೇಶಿಸಿ, ಮಾತನಾಡಿದ್ದಾರೆ. 'ಪ್ರಧಾನಿ ಮೋದಿಯವರ ವಿಶೇಷ ಪರಿಶ್ರಮದಿಂದ ಎರಡು ಸ್ವದೇಶಿ ಲಸಿಕೆ ತಯಾರಾಗಿದೆ. ಅವರ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ' ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಜ. 16): ಪ್ರಧಾನಿ ನರೇಂದ್ರ ಮೋದಿ ಲಸಿಕರ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದಂತೆ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದಾರೆ. ಕೊರೊನಾ ವಾರಿಯರ್ ಚಂದ್ರಶೇಖರ್ ಎಂಬುವವರು ಮೊದಲ ಲಸಿಕೆ ಪಡೆದಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಕೊರೊನಾ ಲಸಿಕೆ ವಿತರಣೆ ಶುರುವಾಗಿದೆ. 

ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ, ವಿಕ್ಟೋರಿಯಾ, ಕಿಮ್ಸ್‌ನಲ್ಲಿ ಲಸಿಕೆ ವಿತರಣೆ ಆರಂಭ

ಲಸಿಕೆಗೆ ಚಾಲನೆ ನೀಡಿದ ಬಳಿಕ ಸಿಎಂ ಮಾಧ್ಯಮಗಳನ್ನುದ್ದೇಶಿಸಿ, ಮಾತನಾಡಿದ್ದಾರೆ. 'ಪ್ರಧಾನಿ ಮೋದಿಯವರ ವಿಶೇಷ ಪರಿಶ್ರಮದಿಂದ ಎರಡು ಸ್ವದೇಶಿ ಲಸಿಕೆ ತಯಾರಾಗಿದೆ. ಅವರ ಶ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ 2443 ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೊದಲ ದಿನವಾದ ಇಂದು 24,300 ಮಂದಿಗೆ ಲಸಿಕೆ ನೀಡಲಾಗುವುದು. ಕೇಂದ್ರ ಸರ್ಕಾರದಿಂದ 8.14 ಲಕ್ಷ ಲಸಿಕೆಗಳು ರಾಜ್ಯಕ್ಕೆ ಬಂದಿವೆ' ಎಂದಿದ್ದಾರೆ. 


Related Video