ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಾದಯಾತ್ರೆ ಒಳಗೂ ರಾಜಕೀಯ!

ಮುಡಾ ಹಗರಣ ವಿರುದ್ಧ ಬಿಜೆಪಿ ಆ.3ರಿಂದ ಪಾದಯಾತ್ರೆ, ಬಿಜೆಪಿ ನಾಯಕರ ವಿರುದ್ಧ  ಯತ್ನಾಳ್ ಗುಡುಗು, ಸಂಪುಟ ಪುನಾರಚನೆ ಚರ್ಚೆ ಬೆನ್ನಲ್ಲೇ ಹಲವು ಸಚಿವರಿಗೆ ಶುರುವಾಗಿದೆ ಭೀತಿ, ಬೆಂಗಳೂರಿಗೆ ಕಳಪೆ ಮಾಂಸ ತರಿಸಿಕೊಂಡವರು ಯಾರು? ವಾರಸುದಾರರೇ ಇಲ್ಲ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

Share this Video
  • FB
  • Linkdin
  • Whatsapp

ಮುಡಾ ಹಗರಣ ವಿರೋಧಿ ಬಿಜೆಪಿ ಪ್ರತಿಭಟನೆ ತೀವ್ರಗೊಳಿಸಿದೆ. ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಗಸ್ಟ್ 3ರಿಂದ ಪಾದಯಾತ್ರೆ ಆರಂಭಿಸುತ್ತಿದೆ. ಬೆಂಗಳೂರಿನಿಂದ ಮೈಸೂರು ವರೆಗೆ ಪಾದಾಯತ್ರೆಗೆ ವೇದಿಕೆ ಸಜ್ಜಾಗಿದೆ. ಇದರ ನಡುವೆ ಬಿಜೆಪಿಯಲ್ಲಿ ಕೆಲ ಮನಸ್ತಾಪಗಳು ಹೊರಬಿದ್ದಿದೆ. ಬಸನಗೌಡ ಪಾಟೀಲ್ ಯತ್ನಾಳ್ ಈ ಪಾದಯಾತ್ರೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಕೂಡ ಸಾಥ್ ನೀಡಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ವಾಲ್ಮೀಕಿ ಹಗರಣದ ಪಾದಯಾತ್ರೆಗೆ ಜಾರಕಿಹೊಳಿ ಮುಂದಾಗಿದ್ದಾರೆ.

Related Video