Anti Conversion Bill: ಲವ್ ಜಿಹಾದ್‌ನಲ್ಲಿ ಬಿಜೆಪಿಯ ನಾಯಕರ ಮಕ್ಕಳಿದ್ದಾರೆ: ಬಿ ಕೆ ಹರಿಪ್ರಸಾದ್

'ಲವ್ ಜಿಹಾದ್‌ನಲ್ಲಿ (Love Jihad) ಬಿಜೆಪಿಯ ದೊಡ್ಡ ನಾಯಕರ ಮಕ್ಕಳಿದ್ದಾರೆ. ಮೊದಲು ಆ ದೊಡ್ಡ ನಾಯಕರ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲಿ. ನಾವು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತೇವೆ' ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ. 

First Published Dec 21, 2021, 3:29 PM IST | Last Updated Dec 21, 2021, 3:29 PM IST

ಬೆಂಗಳೂರು (ಡಿ. 21): ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ವಿವಾದಾತ್ಮಕ ಮತಾಂತರ ನಿಷೇಧ ಮಸೂದೆ (Anti Conversion Bill) ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಉಭಯ ಸದನಗಳಲ್ಲಿ ಮಸೂದೆಗೆ ಒಪ್ಪಿಗೆ ದೊರೆತು ಕಾಯಿದೆ ಅನುಷ್ಠಾನಗೊಂಡರೆ ರಾಜ್ಯದಲ್ಲಿ ಒತ್ತಾಯ ಪೂರ್ವಕ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವ ಚಟುವಟಿಕೆಗಳು ನಿಷೇಧವಾಗಲಿವೆ.

Anti Conversion Bill: ವಿಪಕ್ಷಗಳು ಸಹಕಾರ ಕೊಡಿ, ವಿರೋಧ ಬೇಡ: ಬಿಎಸ್‌ವೈ ಮನವಿ

ಪ್ರಸ್ತಾವಿತ ಮಸೂದೆಯಲ್ಲಿ ಒತ್ತಾಯ, ಆಮಿಷ ಒಡ್ಡಿ ಮತಾಂತರ ಮಾಡುವುದನ್ನು ನಿಷೇಧಿಸುವ ಪ್ರಸ್ತಾಪ ಇದೆ. ಪರಿಶಿಷ್ಟಜಾತಿ, ಪಂಗಡ, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವವರೆಗೆ ಜೈಲು, 50 ಸಾವಿರ ರು. ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಇತರ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು 25 ಸಾವಿರ ರು. ದಂಡ, ಸಾಮೂಹಿಕ ಮತಾಂತರ ಮಾಡಿದವನಿಗೆ 3 ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರು. ದಂಡ ವಿಧಿಸಲು ಅವಕಾಶವಿದೆ ಕಲ್ಪಿಸಲಾಗಿದೆ. 

'ಲವ್ ಜಿಹಾದ್‌ನಲ್ಲಿ ಬಿಜೆಪಿಯ ದೊಡ್ಡ ನಾಯಕರ ಮಕ್ಕಳಿದ್ದಾರೆ. ಮೊದಲು ಆ ದೊಡ್ಡ ನಾಯಕರ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲಿ. ನಾವು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತೇವೆ' ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. 

Video Top Stories