ಕೊರೋನಾ ಟೆಸ್ಟ್ ಮಾಡ್ಬೇಡಿ: ಅಡ್ಡಿಪಡಿಸಿದ ಬಿಜೆಪಿ ನಾಯಕಿ!

ಕೊರೋನಾ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ, ತಮ್ಮ ವಾರ್ಡ್‌ನಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದು ಬೇಡ ಎನ್ನುವ ಮೂಲಕ ಬಿಜೆಪಿ ಕಾರ್ಪೋರೇಟರ್ ಶಶಿಕಲಾ ವಿವಾದಕ್ಕೀಡಾಗಿದ್ದಾರೆ.

First Published May 13, 2020, 2:34 PM IST | Last Updated May 13, 2020, 2:34 PM IST

ಬೆಂಗಲೂರು(ಮೇ.13): ಕೊರೋನಾ ಟೆಸ್ಟ್ ಮಾಡಲು ಬಂದ ಸಿಬ್ಬಂದಿಗೆ, ತಮ್ಮ ವಾರ್ಡ್‌ನಲ್ಲಿ ಕೊರೋನಾ ಪರೀಕ್ಷೆ ಮಾಡಿಸುವುದು ಬೇಡ ಎನ್ನುವ ಮೂಲಕ ಬಿಜೆಪಿ ಕಾರ್ಪೋರೇಟರ್ ಶಶಿಕಲಾ ವಿವಾದಕ್ಕೀಡಾಗಿದ್ದಾರೆ.

ಹೌದು ಬೆಂಗಳೂರಿನ ಕೊರೋನಾ ಹಾಟ್‌ಸ್ಟಾಟ್ ಪಾದರಾಯನಪುರ ಪಕ್ಕದ ವಾರ್ಟ್‌, ರಾಯ್ಪುರ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಟೆಸ್ಟ್ ಮಾಡುವುದಕ್ಕೆ ಇಲ್ಲಿನ ಬಿಜೆಪಿ ಕಾರ್ಪೋರೇಟರ್ ಶಶಿಕಲಾ ಅಡ್ಡಿಪಡಿಸಿದ್ದಾರೆ.

ಇನ್ನು ಈ ಸಂಬಂಧ ಪ್ರಶ್ನಿಸಿದಾಗ ಸ್ಪಷ್ಟನೆ ನಿಡಿರುವ ಬಿಜೆಪಿ ನಾಯಕಿ ಶಶಿಕಲಾ, ರಾಯ್ಪುರ ವಾರ್ಡ್‌ನ ಸೇ. 80ರಷ್ಟು ಮಂದಿ ಪೌರ ಕಾರ್ಮಿಕರು. ಒಂದು ವೇಳೆ ಇಲ್ಲಿ ಟೆಸ್ಟ್ ನಡೆಸಿದರೆ ಅಥವಾ ಪಾಸಿಟಿವ್ ಕೇಸ್ ದಾಖಲಾದರೆ ಇಡೀ ಬೆಂಗಳೂರಿಗೆ ಕೊರೋನಾ ಹರಡುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೇ ತಾನು ಪಾದರಾಯನಪುರದ ಜನರು ರಾಯ್ಪುರದ ಆಸ್ಪತ್ರೆಯಲ್ಲಿ ಟೆಸ್ಟ್ ಮಾಡಿಸುವುದಕ್ಕೆ ಅಡ್ಡಿಪಡಿಸುತ್ತಿರುವುದು. ನಮ್ಮ ವಾರ್ಡ್‌ನ ಜನರು ಕೊರೋನಾ ಟೆಸ್ಟ್ ಮಾಡಿಸುವುದರಲ್ಲಿ ಅರ್ಭಯಂತರವಿಲ್ಲ ಎಂದಿದ್ದಾರೆ.