Asianet Suvarna News Asianet Suvarna News

Covid Helpline: ಸಹಾಯಕ್ಕೆ ಬಾರದ ಸಹಾಯವಾಣಿ, ಬೆಂಗಳೂರು, ಹುಬ್ಬಳ್ಳಿಯಲ್ಲಿ ಸೇವೆ ಸ್ಥಗಿತ

ರಾಜ್ಯದಲ್ಲಿ ಕೊರೋನಾ ಆರ್ಭಟ, 3 ನೇ ಅಬ್ಬರ (Covid 3rd Wave) ಹೆಚ್ಚಾಗಿದೆ. ಆದರೆ ಜನರಿಗೆ ಆರೋಗ್ಯ ಸಹಾಯವಾಣಿ (Helpline) 104 ರಿಂದ ಸಹಾಯ ಸಿಗುತ್ತಿಲ್ಲ. ಬೆಂಗಳೂರು (Bengaluru) ಹಾಗೂ ಹುಬ್ಬಳ್ಳಿಯಲ್ಲಿ (Hubballi) ಸಹಾಯವಾಣಿ ಸ್ಥಗಿತಗೊಂಡಿದೆ. 
 

ಬೆಂಗಳೂರು (ಜ. 11): ರಾಜ್ಯದಲ್ಲಿ ಕೊರೋನಾ ಆರ್ಭಟ, 3 ನೇ ಅಬ್ಬರ (Covid 3rd Wave) ಹೆಚ್ಚಾಗಿದೆ. ಆದರೆ ಜನರಿಗೆ ಆರೋಗ್ಯ ಸಹಾಯವಾಣಿ (Helpline) 104 ರಿಂದ ಸಹಾಯ ಸಿಗುತ್ತಿಲ್ಲ. ಬೆಂಗಳೂರು (Bengaluru) ಹಾಗೂ ಹುಬ್ಬಳ್ಳಿಯಲ್ಲಿ (Hubballi) ಸಹಾಯವಾಣಿ ಸ್ಥಗಿತಗೊಂಡಿದೆ. 

Covid 19: ದಾವಣಗೆರೆ ವಸತಿ ಶಾಲೆಯಲ್ಲಿ 32 ಮಕ್ಕಳು, ಒಂದೇ ಗ್ರಾಮದಲ್ಲಿ 22 ಮಂದಿಗೆ ಸೋಂಕು

ಸರ್ಕಾರ ಬಿಲ್‌ ಪಾವತಿಸದ ಕಾರಣ ಹುಬ್ಬಳ್ಳಿ ಮತ್ತು ಬೆಂಗಳೂರಿನ ಆರೋಗ್ಯ ಸಹಾಯವಾಣಿ ಕೇಂದ್ರಗಳು ಸ್ಥಗಿತವಾಗಿವೆ. ಇದರಿಂದ ಜನರು ಆರೋಗ್ಯ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಸಮಸ್ಯೆ ಎದುರಿಸುವಂತಾಗಿದೆ. 

ರಾಜ್ಯದ ಜನಸಾಮಾನ್ಯರಿಗೆ ಬೆರಳ ತುದಿಯಲ್ಲಿ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹಾಗೂ ಮಾಹಿತಿ ಒದಗಿಸುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 104 ಆರೋಗ್ಯ ಸಹಾಯವಾಣಿ ಕೇಂದ್ರವನ್ನು ಪುನಾರಂಭಿಸುವಂತೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadesh Shettar) ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.