BIG 3: ರಾಯಚೂರು ನಗರ ಪಾಲಿಕೆ ಅಧಿಕಾರಿಗಳೇ, ಶುದ್ಧ ಕುಡಿಯುವ ನೀರು ಕೊಡಿ ಸ್ವಾಮಿ...!

ರಾಯಚೂರು (Raichur)  ನಗರವಾಸಿಗಳು ಕಲುಷಿತ ನೀರು (Contaminated Water)  ಕುಡಿದು ಅನಾರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ರಾಯಚೂರು ನಗರ ಪಾಲಿಕೆ ಸರಬರಾಜು ಮಾಡುವ ನೀರು ಕುಡಿದು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 

First Published Jun 1, 2022, 1:08 PM IST | Last Updated Jun 1, 2022, 1:31 PM IST

ರಾಯಚೂರು (ಜೂ. 01): ಇಲ್ಲಿನ ನಗರವಾಸಿಗಳು ಕಲುಷಿತ ನೀರು (Contaminated Water)  ಕುಡಿದು ಅನಾರೋಗ್ಯ ಸಮಸ್ಯೆಯಿಂದ ಒದ್ದಾಡುತ್ತಿದ್ದಾರೆ. ರಾಯಚೂರು (Raichur)  ನಗರ ಪಾಲಿಕೆ ಸರಬರಾಜು ಮಾಡುವ ನೀರು ಕುಡಿದು ಜನ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮಲ್ಲಮ್ಮ ಎಂಬ ಮಹಿಳೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ರಾಯಚೂರು ಜಿಲ್ಲೆ ಮೊದಲೇ ಬಿರು ಬಿಸಿಲಿಗೆ ಹೆಸರುವಾಸಿ. ಆದರೆ ನಗರ ಸಭೆ ಶುದ್ಧ ಕುಡಿಯುವ ನೀರು ಪೂರೈಸದೇ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇಲ್ಲಿನ ಶುದ್ಧ ನೀರಿನ ಘಟಕದ ಟ್ಯಾಂಕ್ ಕಸ ಕಡ್ಡಿಗಳ ಆಗರವಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ, ನಿರ್ಲಕ್ಷ್ಯ ವಹಿಸಿದ್ದಾರೆ.